April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಸರಕಾರಿ ಪ್ರೌಢ ಶಾಲೆಯಲ್ಲಿ ಗಮಕ ವಾಚನ

ಬೆಳ್ತಂಗಡಿ ಸರಕಾರಿ ಜೂನಿಯರ್ ಕಾಲೇಜಿನ ಹೈಸ್ಕೂಲ್ ವಿಭಾಗದಲ್ಲಿ 8ನೇ ಮತ್ತು ಒಂಭತ್ತನೇ ತರಗತಿಯ ಮಕ್ಕಳಿಗಾಗಿ 10ನೇ ತರಗತಿಯ ಪಠ್ಯ ಭಾಗ ‘ಕರ್ಣ ಭೇದನ ‘ವನ್ನು ಗಮಕಿ ಮಧೂರು ವಿಷ್ಣು ಪ್ರಸಾದ ಕಲ್ಲೂರಾಯ ವಾಚನ ಮಾಡಿ ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯ ವ್ಯಾಖ್ಯಾನ ಮಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾಡಿದ ದ.ಕ ಜಿಲ್ಲ ಗಮಕ ಕಲಾಪರಿಷತ್ ಅಧ್ಯಕ್ಷ ಮೋಹನ ಕಲ್ಲೂರಾಯರು ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ತರಗತಿಯನ್ನು ತೆಗೆದುಕೊಂಡರು. ಕಾರ್ಯದಕ್ಷತೆ, ಶ್ರದ್ಧೆ, ಶ್ರಮ, ಗುರು ಹಿರಿಯರಲ್ಲಿ ಗೌರವ, ಒಳ್ಳೆಯ ವ್ಯಕ್ತಿತ್ವದ ನಡವಳಿಕೆ, ದೇಶಭಕ್ತಿ, ಪರೋಪಕಾರ ಮೊದಲಾದ ವಿಚಾರಗಳ ಬಗ್ಗೆ ದೃಷ್ಟಾಂತವನ್ನು ನೀಡಿ ಮಕ್ಕಳಿಗೆ ಸತ್ಪ್ರೇರಣೆ ನೀಡಿದರು.

ಶಾಲಾ ಮುಖ್ಯಸ್ಥೆ ಶ್ರೀಮತಿ ಪೂರ್ಣಿಮಾ ಉಪಾಧ್ಯಾಯ ಸ್ವಾಗತಿಸಿ, ಕನ್ನಡ ಅಧ್ಯಾಪಿಕೆ ಪೂರ್ಣಿಮಾ ಕೆ ಕೆ ವಂದಿಸಿದರು . ಪಿ ಟಿ ಟೀಚರ್ ಕುಮುದ ಕಾರ್ಯಕ್ರಮ ನಿರೂಪಿಸಿದರು.

Related posts

ಬೈಕ್ ಅಪಘಾತ: ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಅಶೋಕ ಕುಮಾರ್ ನಿಧನ

Suddi Udaya

ಅಗ್ರಿಲೀಫ್ ಎಕ್ಸ್ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಇದರ ವಿಸ್ತ್ರತ ಘಟಕ “ಅಗ್ರಿಲೀಫ್ 2.0” ಉದ್ಘಾಟನೆ

Suddi Udaya

ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Suddi Udaya

ಚಾರ್ಮಾಡಿ ಘಾಟ್ ನಲ್ಲಿ ಎಳೆನೀರು ತುಂಬಿದ ಪಿಕಪ್ ವಾಹನ ಪಲ್ಟಿ

Suddi Udaya

ಪಡಂಗಡಿ ಮಹಿಳಾ ಗ್ರಾಮಸಭೆ: ಮಹಿಳಾ ಸ್ವಚ್ಛತಾಗಾರರಿಗೆ ಗೌರವ ಸನ್ಮಾನ ಮತ್ತು ಸಮವಸ್ತ್ರ ವಿತರಣೆ

Suddi Udaya

ರಾಜ್ಯದ ಜನರಿಗೆ ಬೆಲೆ ಏರಿಕೆ ಮೂಲಕ ಬರೆ ಎಳೆದ ಕಾಂಗ್ರೆಸ್ ಸರಕಾರ :ಉಚಿತ ಗ್ಯಾರಂಟಿಯ ಹೊರೆ ಭರಿಸಲಾದೆ ಸರ್ಕಾರ ದಿವಾಳಿ ಅಂಚಿಗೆ

Suddi Udaya
error: Content is protected !!