ಮುಂಡಾಜೆ: ಇಲ್ಲಿಯ ಚಿತ್ಪಾವನ ಸಂಘಟನೆಯ ವಾರ್ಷಿಕೋತ್ಸವವು ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನದ ಸಭಾಭವನದಲ್ಲಿ ಜರಗಿತು.
ಹಿರಿಯ ಪತ್ರಕರ್ತ, ಯಕ್ಷಗಾನ ಕಲಾವಿದ ಶ್ರೀಕರ ಮರಾಠೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಂಘಟನೆಗಳು ಬಲಗೊಂಡಾಗ ಸಮುದಾಯದಲ್ಲಿ ಒಗ್ಗಟ್ಟು ಹೆಚ್ಚುತ್ತದೆ. ಪ್ರತಿಭೆಗಳ ಅನಾವರಣಕ್ಕೆ, ಸಾಮಾಜಿಕ ಚಿಂತನೆಯ ದೃಷ್ಟಿಯಲ್ಲಿ ಉತ್ತಮ ಕಾರ್ಯಕ್ರಮಗಳು ಮೂಡಿ ಬರಬೇಕು ಎಂದು ಹೇಳಿದರು.

ಸಂಘಟನೆಯ ಅಧ್ಯಕ್ಷೆ ಸುಷ್ಮಾ ಶಶಾಂಕ ಭಿಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃಷಿಕ ಸಂತೋಷ ಹೆಬ್ಬಾರ್, ಗೌರವಾಧ್ಯಕ್ಷ ಜಗದೀಶ ಆರ್.ಫಡಕೆ ಉಪಸ್ಥಿತರಿದ್ದರು.
ಸನ್ಮಾನ: ನಾನಾ ರಂಗಗಳಲ್ಲಿ ವಿಶಿಷ್ಟ ಸಾಧನೆಗೈದ ಸಮುದಾಯದ ಕೇಶವ ಫಡಕೆ (ಸಮಾಜ ಸೇವೆ), ಗೋವಿಂದ ಚಿಪಳೂಣಕರ್ (ಧಾರ್ಮಿಕ), ಡಾ. ಅಮಿತ್ ಖಾಡಿಲ್ಕರ್ (ವೈದ್ಯಕೀಯ), ಜ್ಯೋತಿ ದಿವಾಕರ ಚಿಪಳೂಣಕರ್ (ಸಾಮಾಜಿಕ ಸೇವೆ), ಸ್ವಾತಿ ಗೋಖಲೆ ಮತ್ತು ನೀತಾ ಗೋಖಲೆ (ಅಡುಗೆ), ವೆಂಕಟೇಶ ಬೆಂಡೆ (ಪತ್ರಕರ್ತ), ಅರ್ಜುನ್ ಎ. ಹೆಬ್ಬಾರ್ (ಭೂತಾರಾಧನೆ) ಇವರನ್ನು ಗೌರವಿಸಲಾಯಿತು.
ಸಂಘಟನೆಯ ಸದಸ್ಯರಿಂದ ಭಜನೆ, ಚಿತ್ಪಾವನಿ ಭಾಷೆಯ ನಾಟಕ, ಇತ್ಯಾದಿ ಕಾರ್ಯಕ್ರಮಗಳು ನಡೆದವು.
ಕಾರ್ಯದರ್ಶಿ ರಂಗನಾಥ ಹೆಬ್ಬಾರ್ ವರದಿ ವಾಚಿಸಿದರು. ಗೌರವಾಧ್ಯಕ್ಷ ವಾಸುದೇವ ಗೋಖಲೆ ಸ್ವಾಗತಿಸಿದರು.ಚಿತ್ರಾ ಧನಂಜಯ ಭಿಡೆ ಕಾರ್ಯಕ್ರಮ ನಿರೂಪಿಸಿದರು.