ಕನ್ಯಾಡಿ: ಯುವವಾಹಿನಿ ಬೆಳ್ತಂಗಡಿ ಘಟಕದ ವತಿಯಿಂದ ಶ್ರೀ ರಾಮಕ್ಷೇತ್ರ ಕನ್ಯಾಡಿಗೆ ಭೇಟಿ ನೀಡಿ ಪೂಜ್ಯ ಸ್ವಾಮೀಜಿಗಳಾದ ಮಹಾಮಂಡಲೇಶ್ವರ ೧೦೦೮ ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಇವರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು.

ಪೂಜ್ಯ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಕ್ಷೇತ್ರದ ವತಿಯಿಂದ ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಗುರುರಾಜ್ ಗುರಿಪಳ್ಳ ಇವರನ್ನು ಪೂಜ್ಯ ಸ್ವಾಮೀಜಿಗಳು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಘಟಕದ ಗೌರವ ಸಲಹೆಗಾರರಾದ ರಮಾನಂದ ಸಾಲಿಯಾನ್ ಮುಂಡೂರು, ಮಾಜಿ ಅಧ್ಯಕ್ಷ ರಾಕೇಶ್ ಮುಡುಕೋಡಿ, ಪ್ರಶಾಂತ್ ಮಚ್ಚಿನ, ಹರೀಶ್ ಸುವರ್ಣ, ಎಂಕೆ ಪ್ರಸಾದ್, ಶ್ರೀಮತಿ ಸುಜಾತ ಅಣ್ಣಿ ಪೂಜಾರಿ ಉಪಾಧ್ಯಕ್ಷ ಸುನಿಲ್ ಕನ್ಯಾಡಿ, ಕೋಶಾಧಿಕಾರಿ ನಾಗೇಶ್ ಆದೆಲು, ಮಹಿಳಾ ಸಂಚಾಲನ ಸಮಿತಿ ಪ್ರ.ಸಂಚಾಲಕರಾದ ಲೀಲಾವತಿ ಪಣಕಜೆ, ಅಶೋಕ್ ಕಲ್ಮಂಜ, ಸುದೀಪ್ ಸಾಲಿಯಾನ್ ಸವಣಾಲು, ರಾಘವೇಂದ್ರ ಮೇಲಂತಬೆಟ್ಟು, ವಸಂತ ಪೂಜಾರಿ ಮುಂಡೂರು, ಸಚಿನ್ ನೂಜೋಡಿ, ರೂಪೇಶ್ ಧರ್ಮಸ್ಥಳ, ಶೈಲೇಶ್ ಓಡಿಲ್ನಾಳ, ಶ್ರೀಮತಿ ಪೂರ್ಣಿಮಾ ಮುಂಡಾಜೆ, ಶ್ರೀಮತಿ ಶಾಂಭವಿ ಮುಂಡೂರು, ಜಯಶ್ರೀ ಕಿಲ್ಲೂರು ಹಾಗೂ ಘಟಕದ ಸದಸ್ಯರು ಭಾಗವಹಿಸಿ ಪೂಜ್ಯ ಸ್ವಾಮೀಜಿಗಳ ಆಶೀರ್ವಾದ ಪಡೆದರು.