
ಬೆಳ್ತಂಗಡಿ: ಲಾಯಿಲ ಗ್ರಾಮದ ಶ್ರೀ ಕೊಡಮಣಿತ್ತಾಯ ದೈವದ ದೊಂಪದ ಬಲಿ ಉತ್ಸವ ಮಾ 22 ರಂದು ಅಜೆಕಲ ಸ್ಥಾನದ ಬಳಿ ನಡೆಯಿತು. ಸಂಜೆ ಲಾಯಿಲಗುತ್ತುವಿನಿಂದ ದೈವಗಳ ಭಂಡಾರ ಅಜೆಕಲ ಸ್ಥಾನದ ಬಳಿಗೆ ಬಂದು ,ಅಲ್ಲಿ ದೈವಗಳಿಗೆ ದೊಂಪದ ಬಲಿ ನಡೆಯಿತು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಸೇವಾ ರೂಪವಾಗಿ ಕೊಡಮಣಿತ್ತಾಯ ದೈವಕ್ಕೆ ನೀಡಿದ ತಲೆ ಮುಡಿಯನ್ನು ನಿನ್ನಿಕಲ್ಲು ಬಳಿಯಿಂದ ಮೆರವಣಿಗೆಯಲ್ಲಿ ತರಲಾಯಿತು. ನಂತರ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಸೇರಿದಂತೆ ಊರವರ ಸಮ್ಮುಖದಲ್ಲಿ ದೈವದ ಭಂಡಾರಕ್ಕೆ ಸಮರ್ಪಿಸಲಾಯಿತು. ಈ ವೇಳೆ ಲಾಯಿಲಗುತ್ತು ಚಿತ್ತರಂಜನ್ ಹೆಗ್ಡೆ ಶಾಸಕ ಹರೀಶ್ ಪೂಂಜ ಮತ್ತು ಶಶಿಧರ್ ಶೆಟ್ಟಿಯವರನ್ನು ಗೌರವಿಸಿದರು. ನಂತರ ಕೊಡಮಣಿತ್ತಾಯ ದೈವದ ಹಾಗೂ ಪರಿವಾರ ದೈವಗಳ ದೊಂಪದ ಬಲಿ ಉತ್ಸವ ನಡೆಯಿತು. ಊರಿನ ಪರವೂರಿನ ಸಹಸ್ರಾರು ಮಂದಿ ನೇಮೋತ್ಸವದಲ್ಲಿ ಪಾಲ್ಗೊಂಡು ದೈವದ ಗಂಧ ಪ್ರಸಾದ ಸ್ವೀಕರಿಸಿದರು.