September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಲಾಯಿಲಗುತ್ತು ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳ ದೊಂಪದಬಲಿ ಉತ್ಸವ: ಶಾಸಕ ಹರಿಶ್ ಪೂಂಜರಿಂದ ದೈವಕ್ಕೆ ತಲೆಮುಡಿ ಅರ್ಪಣೆ

ಬೆಳ್ತಂಗಡಿ: ಲಾಯಿಲ ಗ್ರಾಮದ ಶ್ರೀ ಕೊಡಮಣಿತ್ತಾಯ ದೈವದ ದೊಂಪದ ಬಲಿ ಉತ್ಸವ ಮಾ 22 ರಂದು ಅಜೆಕಲ ಸ್ಥಾನದ ಬಳಿ ನಡೆಯಿತು. ಸಂಜೆ ಲಾಯಿಲಗುತ್ತುವಿನಿಂದ ದೈವಗಳ ಭಂಡಾರ ಅಜೆಕಲ ಸ್ಥಾನದ ಬಳಿಗೆ ಬಂದು ,ಅಲ್ಲಿ ದೈವಗಳಿಗೆ ದೊಂಪದ ಬಲಿ ನಡೆಯಿತು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಸೇವಾ ರೂಪವಾಗಿ ಕೊಡಮಣಿತ್ತಾಯ ದೈವಕ್ಕೆ ನೀಡಿದ ತಲೆ ಮುಡಿಯನ್ನು ನಿನ್ನಿಕಲ್ಲು ಬಳಿಯಿಂದ ಮೆರವಣಿಗೆಯಲ್ಲಿ ತರಲಾಯಿತು. ನಂತರ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಸೇರಿದಂತೆ ಊರವರ ಸಮ್ಮುಖದಲ್ಲಿ ದೈವದ ಭಂಡಾರಕ್ಕೆ ಸಮರ್ಪಿಸಲಾಯಿತು. ಈ ವೇಳೆ ಲಾಯಿಲಗುತ್ತು ಚಿತ್ತರಂಜನ್ ಹೆಗ್ಡೆ ಶಾಸಕ ಹರೀಶ್ ಪೂಂಜ ಮತ್ತು ಶಶಿಧರ್ ಶೆಟ್ಟಿಯವರನ್ನು ಗೌರವಿಸಿದರು. ನಂತರ ಕೊಡಮಣಿತ್ತಾಯ ದೈವದ ಹಾಗೂ ಪರಿವಾರ ದೈವಗಳ ದೊಂಪದ ಬಲಿ ಉತ್ಸವ ನಡೆಯಿತು. ಊರಿನ ಪರವೂರಿನ ಸಹಸ್ರಾರು ಮಂದಿ ನೇಮೋತ್ಸವದಲ್ಲಿ ಪಾಲ್ಗೊಂಡು ದೈವದ ಗಂಧ ಪ್ರಸಾದ ಸ್ವೀಕರಿಸಿದರು.

Related posts

ನಿಡ್ಲೆ :ಅಸ್ತಿ ಮಜ್ಜೆ ಶಸ್ತ್ರಚಿಕಿತ್ಸೆ ನೆರವು

Suddi Udaya

ರಾಜಕೇಸರಿ ಸೇವಾ ಟ್ರಸ್ಟ್‌ನ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ ಅಂಬೇಡ್ಕರ್ ಸೇವರತ್ನ ಅಂತರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ

Suddi Udaya

ನಾವೂರಿನಿಂದ ಕುಮರಾಜೆ ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮ ಪಂಚಾಯಿತಿಗೆ ಎಸ್.ಡಿ.ಪಿ.ಐ ಮನವಿ

Suddi Udaya

ಜೂನಿಯರ್ ರೆಡ್ ಕ್ರಾಸ್ ಪರೀಕ್ಷೆ: ಎಸ್.ಡಿ.ಎಂ. ಪಿಯು ಕಾಲೇಜಿನ 24 ವಿದ್ಯಾರ್ಥಿಗಳಿಗೆ ಅತ್ಯುನ್ನತ ಶ್ರೇಣಿ

Suddi Udaya

ಗುರಿಪಳ್ಳ ಬಿಜೆಪಿಯ 30 ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ

Suddi Udaya

ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಯಲ್ಲಿ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ

Suddi Udaya
error: Content is protected !!