ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯ ಸಹಕಾರ ಮಂಡಲ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಹಾಗೂ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಕೋಶ, ವಾಣಿಜ್ಯ ಸಂಘ, ಪ್ಲೇಸ್ಮೆಂಟ್ ಸೆಲ್, ಯುವ ರೆಡ್ ಕ್ರಾಸ್ ಘಟಕ ಮತ್ತು ರೋವರ್ಸ್ -ರೇಂಜರ್ಸ್ ಘಟಕಗಳ ಸಹಯೋಗದಲ್ಲಿ ಮಾ.25 ರಂದು ಬೆಳ್ತಂಗಡಿ ಸ.ಪ್ರ.ದ. ಕಾಲೇಜಿನಲ್ಲಿ ಸಹಕಾರಿ ಕ್ಷೇತ್ರದಲ್ಲಿರುವ ಉದ್ಯೋಗಾವಕಾಶಗಳು ಹಾಗೂ ಡಿಪ್ಲೋಮೋ ಮತ್ತು ಸರ್ಟಿಫಿಕೇಟ್ ಕೋರ್ಸ್ ಗಳ ಬಗ್ಗೆ ಯುವಜನರ ಕ್ಲಸ್ಟರ್ ತರಗತಿ ಕಾರ್ಯಾಗಾರವನ್ನು ಆಯೋಜಿಸಲಾಯಿತು.

ಕಾರ್ಯಾಗಾರದಲ್ಲಿ ಮಂಗಳೂರಿನ ಸಹಕಾರಿ ಯೂನಿಯನ್ ನ ಕಾರ್ಯನಿರ್ವಹಣಾಧಿಕಾರಿ ಎಸ್ ವಿ ಹಿರೇಮಠ್ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಸಹಕಾರಿ ಕ್ಷೇತ್ರದಲ್ಲಿರುವ ವಿವಿಧ ಉದ್ಯೋಗವಕಾಶಗಳು ಮತ್ತು ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ತರಬೇತಿಯನ್ನು ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸುರೇಶ್ ವಿ. ಕಾರ್ಯಕ್ರಮದಲ್ಲಿ ಮಂಗಳೂರು ಸಹಕಾರಿ ಯೂನಿಯನ್ ನ ವ್ಯವಸ್ಥಾಪಕ ನಾಗಪ್ರಸಾದ್ , ಪ್ಲೇಸ್ಮೆಂಟ್ ಅಧಿಕಾರಿಗಳಾದ ಪ್ರೊ. ರಶ್ಮಿ ಎಚ್., ಐಕ್ಯೂಎಸಿ ಸಂಚಾಲಕರಾದ ಡಾ| ಕುಶಾಲಪ್ಪ ಎಸ್ ಉಪಸ್ಥಿತರಿದ್ದರು.
ಯುವ ರೆಡ್ ಕ್ರಾಸ್ ಘಟಕದ ಸಂಚಾಲಕರಾದ ರೋವರ್ ಸ್ಕೌಟ್ ಲೀಡರ್ ಡಾ| ರವಿ ಎಂ. ಎನ್., ಸ್ವಾಗತಿಸಿ, ವಾಣಿಜ್ಯ ಸಂಘ ಸಂಚಾಲಕರಾದ ಪ್ರೊ| ನವೀನ ವಂದಿಸಿದರು.