ಮೇಲಂತಬೆಟ್ಟು : ಶ್ರೀ ಬ್ರಹ್ಮ ಬೈದರ್ಕಳ ಧರ್ಮಚಾವಡಿ ಪಾಲೆತ್ತಡಿ ಗುತ್ತು ಇದರ ಜೀರ್ಣೋದ್ದಾರ ಬಗ್ಗೆ ನಡೆದ ಸಮಾಲೋಚನ ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವ ಅಧ್ಯಕ್ಷ ಹಾಗೂ ಬೆಸ್ಟ್ ಪೌಂಡೇಶನ್ ಸ್ಥಾಪಕ ಅಧ್ಯಕ್ಷ ರಕ್ಷಿತ್ ಶಿವರಾಮ್ ಸೂಕ್ತ ಸಲಹೆ ಸೂಚನೆ ನೀಡಿ ಸಂಪೂರ್ಣ ಸಹಕಾರ ನೀಡುವುದರೊಂದಿಗೆ ಶುಭ ಹಾರೈಸಿದರು. ಸಭೆಯಲ್ಲಿ ಜೀರ್ಣೋದ್ಧಾರದ ಕುರಿತಾಗಿ ಆರ್ಥಿಕ ಕ್ರೋಡೀಕರಣ ಬಗ್ಗೆ ಹಲವಾರು ವಲಯಗಳಲ್ಲಿ ಸಮಿತಿಗಳನ್ನು ರಚಿಸಲಾಯಿತು. ಶ್ರಮದಾನ ಹಾಗೂ ಸ್ವಯಂ ಸೇವಕರ ತಂಡವನ್ನು ರಚಿಸಲು ತೀರ್ಮಾನಿಸಲಾಯಿತು.


ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಚಿನ್ ಕುಮಾರ್ ನೂಜೋಡಿ ಹಾಗೂ ಎಸ್.ಕೆ.ಡಿ.ಆರ್.ಡಿ.ಪಿ ಜಿಲ್ಲಾ ನಿರ್ದೇಶಕ ಪ್ರವೀಣ್ ಬಟ್ಕರಡ್ಕ ಇವರು ಮುಂದಿನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಪ್ರಕಾಶ್ ಕೋಟ್ಯಾನ್ ಡೊಂಕಬೆಟ್ಟು ನಾರಾವಿ ಇವರು ತಮ್ಮ ಕುಟುಂಬಿಕರ ಪರವಾಗಿ ಮತ್ತು ಅಭಿಷೇಕ್ ರಾಮಸೇನೆ ಕರ್ನಾಟಕ ಬೆಳ್ತಂಗಡಿ ಇವರು ಸಂಘದ ಮುಖಾಂತರ ಧರ್ಮಚಾವಡಿಯ ಕೆಲಸ ಕಾರ್ಯಗಳಲ್ಲಿ ಕೈ ಜೋಡಿಸುವುದಾಗಿ ಭರವಸೆಯನ್ನು ನೀಡಿರುತ್ತಾರೆ. ಈ ಸಭೆಯಲ್ಲಿ ಸಮಿತಿ ಕಾರ್ಯಾಧ್ಯಕ್ಷರಾದ ನಾರಾಯಣ ಪೂಜಾರಿ ಬರಮೇಲು, ಸಮಿತಿ ಕಾರ್ಯದರ್ಶಿ ಲಕ್ಷ್ಮಣ ಹೆಚ್.ಕಡಿರುದ್ಯಾವರ, ನಾಗಮ್ಮ ಕುಂಜಿರ ಪೂಜಾರಿ, ಟ್ರಸ್ಟ್ ನ ಅಧ್ಯಕ್ಷ ಲಕ್ಷ್ಮೀಶ ಪಾಲೆತ್ತಡಿ, ಕಾರ್ಯದರ್ಶಿ ದಮಯಂತಿ ಬಾಲಕೃಷ್ಣ ಪಾಲೆತ್ತಡಿ, ಕುಟುಂಬದ ಹಿರಿಯರಾದ ಕುಂಜಿರ ಪೂಜಾರಿ ಮಜಲು, ಮುತ್ತ ಯಾನೆ ಧರ್ಣಪ್ಪ ಮೇಗಿನ ಕುರ್ತೋಡಿ, ಕೃಷಿಕ ಯುವಕ ಸಂಘದ ಅಧ್ಯಕ್ಷ ಜಗದೀಶ್ ಬರಮೇಲು, ಉದ್ಯಮಿ ಮೋಹನ್ ಬಟ್ಯರಡ್ಕ ಹರಿಪ್ರಸಾದ್ ಪಾಲೆತ್ತಡಿ, ಪ್ರಸನ್ನ ಅಂಚನ್ ಮಡಿಲು, ಪಂಚಾಯತ್ ಸದಸ್ಯರಾದ ದೀಪಿಕಾ ಯೋಗೀಶ್, ಯುವವಾಹಿನಿಯ ಪ್ರಧಾನ ಕಾರ್ಯದರ್ಶಿ ಮಧುರ ರಾಘವ, ಶಾಂಭವಿ ಮುಂಡೂರು, ಜಯರಾಜ್ ನಡಕರ, ಶ್ರೀರಕ್ಷಾ ಅವಿನಾಶ್, ಗೀತ ಪ್ರಕಾಶ್ ಕುರ್ತೋಡಿ, ವರದರಾಜ್ ವಿನಾಯಕ ವುಡ್ ಇಂಡಸ್ಟ್ರೀಸ್ ವರಕಬೆ, ವಿನಯ್ ಕೆ ಗುರಿಪಳ್ಳ ಪ್ರಭಾಕರ ಪಾಲೆತ್ತಡಿ, ಮಾಜಿ ಸೈನಿಕ ಗುರುವಪ್ಪ ಉಜಿರೆಬೈಲು, ಕುಂಜಿರ ಪೂಜಾರಿ ಮಜಲು, ಶ್ರೀಕೇಶ್ ಕೋಟ್ಯಾನ್, ನವೀನ್ ಗೌಡ ಸವಣಾಲು, ಶೀನ ಮಲೆಬೆಟ್ಟು, ಸರಸ್ವತಿ ಗೋಳಿದಪಲ್ಕೆ, ವಿಶ್ವನಾಥ ಕೋಟೆ, ಅರುಣ್ ಕುಮಾರ್, ಗೋಪಾಲಕೃಷ್ಣ ಧರ್ಮಸ್ಥಳ, ವಸಂತ ಟೈಲರ್ ನಿಡ್ಯಾರ, ಸೂರಜ್ ನಡುವಡ್ಕ, ರಾಜೇಶ್ ಕುಲಾಲ್ ಪಕ್ಕಿದಕಲ, ತಿಮ್ಮಪ್ಪ ಶೆಟ್ಟಿ ಅತ್ತೋಡಿ, ರಕ್ಷಿತ್ ಗೋಳಿದಪಲ್ಕೆ, ಸರಸ್ವತಿ ಗೋಳಿದಪಲ್ಕೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರು, ದೇವಪ್ಪ ಕೊಂರ್ಗೋಡಿ, ತಿಮ್ಮಪ್ಪ ಮೂಲ್ಯ ಕೊಂರ್ಗೋಡಿ, ಅಶ್ವಿನ್ ಬಳೆಂಜ ಹಾಗೂ ಇನ್ನಿತರ ಗ್ರಾಮಸ್ಥರು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಸಮಿತಿ ಕೋಶಾಧಿಕಾರಿ ಶ್ರೀಮತಿ ಸುಚಿತ್ರ ಸ್ವಾಗತಿಸಿ ವಂದಿಸಿದರು.