ಬೆಳ್ತಂಗಡಿ: ತಾಲೂಕಿನ ಪ್ರತಿಷ್ಠಿತ ಗುತ್ತು ಮನೆತನಗಳಲ್ಲಿ ಒಂದಾದ ಮುಗ್ಗಗುತ್ತುವಿಕೆ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿದರು.

ಆಡಳಿತ ಮೊಕ್ತೇಸರ ಪೀತಾಂಬರ ಹೆರಾಜೆ ಮನೆತನದ ಹಿನ್ನಲೆ, ಚರಿತ್ರೆಯನ್ನು ಶಾಸಕರಿಗೆ ವಿವರಿಸಿ ಸ್ವಾಗತಿಸಿದರು. ತುಳವರ ಸಂಪ್ರದಾಯ ಆಚರಣೆಯಂತೆ ಅವರು ದಂತ ವೈದ್ಯ ರಾಜಾರಮ್ ರವರ ಮಾತೃಶ್ರೀಯ ಹದಿನಾರನೇ ಕಾರ್ಯದ ಸಂದರ್ಭ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ದಂತ ವೈದ್ಯ ರಾಜಾರಾಮ್ ದಂಪತಿಗಳು, ಜಿ. ಭಗೀರಥ, ರಕ್ಷಿತ್ ಶಿವರಾಂ, ಜಯ ವಿಕ್ರಮ ಕಲ್ಲಾಪು, ಸುಜಿತ ವಿ ಬಂಗೇರ, ಮನೋಹರ ಇಳಂತಿಲ, ಕೃಷ್ಣಪ್ಪ ಪೂಜಾರಿ, ದಿವಾಕರ್ ಕೆ ಪಿ, ಪ್ರಶಾಂತ್ ಕೆ, ಜಯರಾಮ ಬಂಗೇರ, ವಸಂತ ಸುವರ್ಣ ಹಾಗೂ ಕುಟುಂಬಸ್ಥರು ಹಾಜರಿದ್ದರು.