26.3 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅಖಿಲ ಭಾರತ ಬ್ಯಾರಿ ಪರಿಷತ್ ಮಹಿಳಾ ಘಟಕದ ವತಿಯಿಂದ ಮರ್ಹೂಮ್ ಮುಹಮ್ಮದ್ ಕುಂಜತ್ತಬೈಲು ರವರಿಗೆ ನುಡಿನಮನ.

ಅಖಿಲ ಭಾರತ ಬ್ಯಾರಿ ಪರಿಷತ್ ಮೈಕಾಲ ಮಹಿಳಾ ಘಟಕದ ವತಿಯಿಂದ ಇತ್ತೀಚೆಗೆ ಅಗಲಿದ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್ ಹಾಗೂ ಅಖಿಲ ಭಾರತ ಬ್ಯಾರಿ ಪರಿಷತ್‌ನ ಹಿರಿಯ ಸದಸ್ಯರಾದ ಮುಹಮ್ಮದ್ ಕುಂಜತ್ತಬೈಲ್ ರವರಿಗೆ ಆನ್ಲೈನ್ ಮೂಲಕ ಸಭೆ ಸೇರಿ ನುಡಿನಮನವನ್ನು ಸಲ್ಲಿಸಿದರು.

ಕೇಂದ್ರೀಯ ಸಮಿತಿಯ ಅಧ್ಯಕ್ಷ , ಮಹಿಳಾ ಘಟಕದ ಪ್ರಧಾನ ಸಲಹೆಗಾರ ಜನಾಬ್ ಯು. ಹೆಚ್ ಖಾಲಿದ್ ಉಜಿರೆ ರವರ ನಿರ್ದೇಶನದಂತೆ ನಡೆದ ಈ ಸಭೆಯಲ್ಲಿ ಶಮೀಮ ಕುತ್ತಾರ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮಾತನಾಡಿದ ಜನಾಬ್| ಯು. ಹೆಚ್ ಖಾಲಿದ್ ಉಜಿರೆಯವರು ಮುಹಮ್ಮದ್ ಕುಂಜತ್ತಬೈಲ್‌ ರವರಿಗೆ ನುಡಿನಮನ ಸಲ್ಲಿಸಿ ಅವರು ಸರಳ ಜೀವನವನ್ನು ನಡೆಸಿದ ಸ್ಪೂರ್ತಿದಾಯಕ ವ್ಯಕ್ತಿ. ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿ ಜನಾನುರಾಗಿದ್ದರು, ಹಕ್ಕುಪತ್ರದ ಆಕಾಂಕ್ಷಿಗಳಿಗೆ ಅವರು ಫಲಾನುಭವಗಳನ್ನು ನೀಡುವಲ್ಲಿ ಸಾಕಷ್ಟು ಶ್ರಮಿಸಿದ್ದರು. ಅವರು ಬಿಟ್ಟು ಹೋದ ಆದರ್ಶಗಳು ಸ್ಪೂರ್ತಿಯಾಗಲಿ ಎಂದು ಅವರು ಅಖಿಲ ಭಾರತ ಬ್ಯಾರಿ ಪರಿಷತ್‌ಗಾಗಿ ಸೇವೆ ಸಲ್ಲಿಸಿದ ಕ್ಷಣಗಳನ್ನು ನೆನಪಿಸಿಕೊಂಡರು.


ಅಖಿಲ ಭಾರತ ಬ್ಯಾರಿ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಜನಾಬ್| ಇಬ್ರಾಹಿಂ ನಡುಪದವು ರವರು ಮಾತನಾಡಿ, ಅಗಲಿದ ಹಿರಿಯ ಸಲಹೆಗಾರರಾಗಿದ್ದ ಮುಹಮ್ಮದ್ ಕುಂಜತ್ತಬೈಲ್‌ರವರ ಸ್ಥಾನ ತುಂಬಲು ಅವರಿಂದ ಮಾತ್ರ ಸಾಧ್ಯ. ಸ್ವಾವಲಂಬಿ ಜೀವನ ನಡೆಸುತ್ತಿದ್ದ ಅವರು ಉತ್ತಮ ಭಾಷಣಕಾರರೂ ಕೂಡಾ ಆಗಿದ್ದರು. ಕಾರ್ಯಕ್ರಮದಲ್ಲಿ ಸಮಯಕ್ಕೆ ಬಹಳ ಸ್ಪಂದನೆ ಕೊಡುತ್ತಿದ್ದರು. ಅವರೊಂದಿಗೆ ಕಳೆದ ನಿಮಿಷಗಳು ಅವಿಸ್ಮರಣೀಯ ಎಂದರು.


ಮಹಿಳಾ ಘಟಕದ ಗೌರವಾಧ್ಯಕ್ಷೆ ಸಾಹಿತಿ ಹಫ್ಸಾ ಬಾನು ಬೆಂಗಳೂರು ಮರ್ಹೂಂ ಮುಹಮ್ಮದ್ ಕುಂಜತ್ತಬೈಲ್ ರವರ ಕುರಿತು ಮಾತನಾಡಿ, ಅವರ ವಿಯೋಗ ನಮ್ಮ ಪರಿಷತ್ತಿಗೆ ಮಾತ್ರವಲ್ಲದೆ ಬ್ಯಾರಿ ಸಮುದಾಯಕ್ಕೆ ತುಂಬಲಾರದ ನಷ್ಟ. ಅಖಿಲ ಭಾರತ ಬ್ಯಾರಿ ಪರಿಷತ್ತಿಗೆ ಆಧಾರವಾಗಿದ್ದ ಸ್ತಂಭವೊಂದು ಕಳಚಿದೆ. ಆ ಸ್ಥಾನವನ್ನು ಯಾರಿಂದಲೂ ತುಂಬಲು ಆಗದು. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.


ಮಹಿಳಾ ಘಟಕಾಧ್ಯಕ್ಷೆ ಶಮೀಮ ಕುತ್ತಾರ್ ಅವರು ಮಾತನಾಡಿ ಹಿರಿಯ ಬ್ಯಾರಿ ಚೇತನವೊಂದು ಅಲ್ಲಾಹನ ಅನುಲ್ಲಂಘನೀಯ ವಿಧಿಗೆ ಒಳಗಾಗಿದೆ. ಮಹಿಳಾ ಘಟಕದ ರಚನೆಗೆ ಸಕಾರಾತ್ಮಕ ಬೆಂಬಲವಿತ್ತಿದ್ದ ಅವರು ಸಾರ್ವಜನಿಕ ಕ್ಷೇತ್ರದಲ್ಲೂ ತಮ್ಮನ್ನು ಉತ್ತಮ ರೀತಿಯಲ್ಲಿ ತೊಡಗಿಸಿದ್ದರು. ಅವರ ಸರಳ, ಸ್ನೇಹಪರತೆಯ ವ್ಯಕ್ತಿತ್ವವನ್ನು ಸ್ಮರಿಸಿ ಅವರ ಪಾರತ್ರಿಕ ಜೀವನದ ಸಂತೋಷಕ್ಕಾಗಿ ಪ್ರಾರ್ಥಿಸಿ ನುಡಿನಮನವಿತ್ತರು. ಕಾರ್ಯಕಾರಿ ಸಮಿತಿ ಸದಸ್ಯೆ ರಮ್ಲತ್ ಕಿರಾಅತ್ ಪಠಿಸಿದರು. ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ರಮೀಝ ಯಂ.ಬಿ ಸ್ವಾಗತಿಸಿದರು. ಘಟಕಾಧ್ಯಕ್ಷೆ ಶಮೀಮಾ ಕುತ್ತಾರ್ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಘಟಕದ ಉಪಾಧ್ಯಕ್ಷೆ ಅಸ್ಮತ್ ವಗ್ಗ ಧನ್ಯವಾದವನ್ನು ಸಮರ್ಪಿಸಿದರು.

Related posts

ಬಂದಾರು ಪರಿಸರದಲ್ಲಿ ಗಜ ಹೆಜ್ಜೆ: ಒಂದುವಾರದಿಂದ ಒಂಟಿಸಲಗದ ಸಂಚಾರ

Suddi Udaya

ಮಾಜಿ ಶಾಸಕ ಕೆ. ವಸಂತ ಬಂಗೇರ ರವರಿಗೆ ಅಂತಿಮ ನಮನ ಸಲ್ಲಿಸಿದ್ದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹಾಗೂ ಮಾಜಿ ಶಾಸಕ ಜೆ.ಆರ್ ಲೋಬೋ

Suddi Udaya

ಪಾರೆಂಕಿ ಶ್ರೀ ನಾರಾಯಣ ಗುರು ಸೇವಾ ಸಂಘದ ನೂತನ ಸಮಿತಿ ರಚನೆ

Suddi Udaya

ಪುಂಜಾಲಕಟ್ಟೆ ಕಾಲೇಜಿನಲ್ಲಿ  ವಿದ್ಯಾರ್ಥಿಗಳಿಗೆ ಬೆನ್ನುಹುರಿ ಅಪಘಾತ  ಮಾಹಿತಿ ಕಾರ್ಯಾಗಾರ

Suddi Udaya

ಮಚ್ಚಿನ ಸರಕಾರಿ ಪ್ರೌಢಶಾಲೆಯಲ್ಲಿ ಕನಕದಾಸ ಜಯಂತಿ ಆಚರಣೆ

Suddi Udaya

ಧರ್ಮಸ್ಥಳ ಹರ್ಷೇಂದ್ರ ಕುಮಾರ್ ಪ್ರತಿಷ್ಠಿತ ಅಗರಿ ಪ್ರಶಸ್ತಿಗೆ ಆಯ್ಕೆ

Suddi Udaya
error: Content is protected !!