
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ದೇವಾಲಯಗಳಾದ ಧರ್ಮಸ್ಥಳ, ಸುಬ್ರಹ್ಮಣ್ಯ ಸೇರಿದಂತೆ ಇತರ ಸ್ಥಳಗಳಿಗೆ ಸಂಪರ್ಕವನ್ನು ಹೆಚ್ಚಿಸುವ ದೃಷ್ಟಿಯಿಂದ ರಾ.ಹೆ 75 ಮತ್ತು ರಾ.ಹೆ 275ರ ಪೆರಿಯಶಾಂತಿ – ಪೈಚೂರು ಸಂಪರ್ಕ ರಸ್ತೆ ಮತ್ತು ರಾ.ಹೆ 73 ಮತ್ತು ರಾ.ಹೆ 169ರ ಗುರುವಾಯನಕೆರೆ – ಬಜಗೋಳಿ ಸಂಪರ್ಕ ಎರಡು ಸ್ಪರ್ ರಸ್ತೆಗಳ ನಿರ್ಮಾಣಕ್ಕೆ ಮಾ.27ರಂದು ದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಸಂಸದ ಕ್ಯಾ. ಬ್ರಿಜೇಶ್ ಚೌಟರೊಂದಿಗೆ ಶಾಸಕ ಹರೀಶ್ ಪೂಂಜ ಭೇಟಿ ಮಾಡಿ ಮನವಿ ಮಾಡಿದರು.