ಬೆಳ್ತಂಗಡಿ: ಕನಸಿನ ಮನೆ ಎಂದೇ ಖ್ಯಾತಿ ಪಡೆದಿರುವ ಉಜಿರೆ ಲಕ್ಷ್ಮೀ ಇಂಡಸ್ಟೀಸ್ ಕನಸಿನ ಮನೆ ವಾಮದಪದವು ಶಾಖೆ ಮಾ.30 ರಂದು ಶುಭಾರಂಭಗೊಳ್ಳಲಿದೆ.
ಕಳೆದ ಹಲವು ದಶಕಗಳಿಂದ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಸಂಸ್ಥೆಯು ಸಮಾಜದಲ್ಲಿ ಬೆಳೆಯುತ್ತ ಬಂದಿದ್ದು ೪೦೦ ಮಂದಿಗೆ ಉದ್ಯೋಗವಕಾಶ ಕಲ್ಪಿಸಿರುವ ಕನಸಿನ ಮನೆ ಲಕ್ಷ್ಮೀ ಇಂಡಸ್ಟ್ರೀಸ್ ನೆರೆಯ ಬಂಟ್ವಾಳ ತಾಲೂಕಿನ ವಾಮದಪದವಿನಲ್ಲಿ ಶಾಖೆ ತೆರೆಯಲಿದ್ದು ಗ್ರಾಹಕರ ಕನಸಿನ ಮನೆಗೆ ಸೌಂದರ್ಯದ ಸ್ಪರ್ಶ ನೀಡಲು ಸಜ್ಜಾಗಿದೆ.
ಶ್ರೀ ಕ್ಚೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ವೀ.ಹೆಗ್ಗಡೆಯವರ ಶುಭಾರ್ಶೀವಾದಗಳೊಂದಿಗೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆಯ ನೂತನ ಶಾಖೆ ವಾಮದಪದವಿನ ಕಲಸಡ್ಕ ಕಾಂಪ್ಲೆಕ್ಸ್‌ನಲ್ಲಿ ಮಾ.೩೦ ರಂದು ಶುಭಾರಂಭಗೊಳ್ಳಲಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಶಾಖೆಯನ್ನು ಉದ್ಘಾಟಿಸಲಿರುವವರು. ಉದ್ಯಮಿ, ಬರೋಡ ಶಶಿ ಕೆಟರಿಂಗ್ ಸರ್ವಿಸಸ್ ಪ್ರೈ.ಲಿ ಶಶಿಧರ್ ಶೆಟ್ಟಿ ನವಶಕ್ತಿ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಕೆನರಾ ಬ್ಯಾಂಕಿನ ನಿವೃತ್ತ ಅಧಿಕಾರಿ ಜಿ.ಕೆ.ಭಟ್, ಗುತ್ತಿಗೆದಾರ ಅಮ್ಮು ರೈ ಹರ್ಕಾಡಿ ಹಾಗೂ ಚೆನೈತ್ತೋಡಿ ಗ್ರಾ.ಪಂ. ಅಧ್ಯಕ್ಷೆ ವನಿತಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವವರು ಎಂದು ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ ಕೆ.ಮೋಹನ್ ಕುಮಾರ್ ಹಾಗೂ ರೇಶ್ಮಾ ಮೋಹನ್ ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನಿಮ್ಮ ಕನಸಿನ ಮನೆಗೆ ನಮ್ಮ ಸೌಂದರ್ಯದ ಸ್ಪರ್ಶ: ಮೋಹನ್ ಕುಮಾರ್
ನೂತನ ತಂತ್ರಜ್ಞಾನದ ಆಕರ್ಷಕ ವಿನ್ಯಾಸಗಳೊಂದಿಗೆ ನಿಮ್ಮ ಕನಸಿನ ಮನೆಗೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆಯ ಸೌಂದರ್ಯದ ಸ್ಪರ್ಶ, ಸಿಮೆಂಟ್, ಪೈಬರ್, ಸ್ಟೀಲ್‌ನ ದಾರಂದ, ಕಿಟಕಿ ಫ್ರೇಮ್, ಬಾಗಿಲು, ಡಬ್ಲೂಪಿಸಿ ಡೋರ್ ಫ್ರೇಮ್, ವಿಂಡೋಸ್ ಫ್ರೇಮ್‌ಗಳು, ಅಲ್ಯೂಮಿನಿಯಂ, ಬಾತ್ ರೂಮ್ ಡೋರ್‌ಗಳು ಮಳಿಗೆಯಲ್ಲಿ ಲಭ್ಯವಿರುವುದಾಗಿ ಸಂಸ್ಥೆಯ ಮಾಲಕ ಕೆ.ಮೋಹನ್ ಕುಮಾರ್ ತಿಳಿಸಿದ್ದಾರೆ.