ಮಿತ್ತಬಾಗಿಲು: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ (ದುರ್ಗಾದೇವಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವು ಮಾ.30ರಿಂದ ಆರಂಭಗೊಂಡು ಎ.5 ರವರೆಗೆ ನಡೆಯಲಿದೆ.
ಮಾ.30 ಬೆಳಿಗ್ಗೆ ಗಂಟೆ ೧೦.೦೦ಕ್ಕೆ ತೋರಣ ಮುಹೂರ್ತ, ಅಂಕಗುಂಟ, ಕೋಳಿಗುಂಟ, ಧ್ವಜಾರೋಹಣ, ಪಂಚಾAಗ ಶ್ರವಣ, ಅಂಕುರ ಪೂಜೆ, ಮಧ್ಯಾಹ್ನ ಪೂಜೆ, ಪ್ರಸಾದ ವಿತರಣೆ, ರಾತ್ರಿ ಬಲಿ ಉತ್ಸವ. ಸಂಜೆ ಗಂಟೆ ೫.೩೦ ಕ್ಕೆ ಭಜನಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿ ಗಂಟೆ ೮ ರಿಂದ ಹರಿಕಥೆ
ಮಾ.31 ಪೂರ್ವಾಹ್ನ ೧೧ಕ್ಕೆ ಹೊರೆಕಾಣಿಕೆ ಸಮರ್ಪಣೆ, ಮಧ್ಯಾಹ್ನ ಮಹಾಪೂಜೆ, ರಾತ್ರಿ ಶ್ರೀ ದುರ್ಗಾದೇವಿ ಸನ್ನಿಧಿಯಲ್ಲಿ ಬಲಿ ಹೊರಡುವುದು ಸಂಜೆ ಗಂಟೆ ೫.೩೦ಕ್ಕೆ ಭಜನಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿ ಗಂಟೆ ೯.೦೦ ರಿಂದ ಮಂದಾರ ಕಲಾವಿದರು ಉಜಿರೆ ಇವರಿಂದ ‘ಮಾಯಾದ ತುಡರ್’ ತುಳು ಭಕ್ತಿ ಪ್ರಧಾನ ನಾಟಕ ನಡೆಯಲಿದೆ.
ಎ.1 ಶ್ರೀ ದುರ್ಗಾದೇವಿಯ ದರ್ಶನ ಬಲಿ ಉತ್ಸವ ಮತ್ತು ಪ್ರಸಾದ ವಿತರಣೆ, ಬೆಳಿಗ್ಗೆ ಗಂಟೆ ೮ರಿಂದ ಚಂಡಿಕಾ ಹೋಮ, ಮಧ್ಯಾಹ್ನ ಪೂರ್ಣಾಹುತಿ, ರಾತ್ರಿ ಶ್ರೀ ದುರ್ಗಾಪರಮೇಶ್ವರಿ ದೇವಿಯಬಲಿ ಉತ್ಸವ ಹೊರಡುವುದು ಹಾಗೂ ದುರ್ಗಾದೇವಿ ಸನ್ನಿಧಿಯಲ್ಲಿ ರಂಗಪೂಜೆ, ರಾತ್ರಿ ಗಂಟೆ 7 ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ, ಸಂಜೆ ಗಂಟೆ ೫.೩೦ಕ್ಕೆ ಭಜನಾ ಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿ ೯.೦೦ರಿಂದ ಸುಗಮ ಸಂಗೀತ ಶ್ರೀ ದೇವಿ ಧರ್ಮಸ್ಥಳ ಮತ್ತು ಬಳಗದವರಿಂದ, ರಾತ್ರಿ ೧೦ಕ್ಕೆ ಸಂಗಮ ಕಲಾವಿದರು ಉಜಿರೆ ಇವರಿಂದ ಸುಬ್ಬು ಸಾಂಟ್ಯಾರ್ ವಿರಚಿತ ತುಳು ಹಾಸ್ಯಮಯ ಸಾಂಸಾರಿಕ ನಾಟಕ “ನನ ಮರ್ಲ್ ಕಟ್ಟೊಡ್ಚಿ”
ಎ.2 ಬೆಳಗ್ಗಿನ ಉತ್ಸವ, ದೀಪಾರಾಧನೆ, ಗಣಹೋಮ, ದುರ್ಗಾಹೋಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ಬಲಿ ಉತ್ಸವ, ವಸಂತ ಕಟ್ಟೆ ಪೂಜೆ, ಮಹಾಪೂಜೆ, ಸಂಜೆ ಗಂಟೆ ೫.೩೦ಕ್ಕೆ ಭಜನಾ ಕಾರ್ಯಕ್ರಮ ರಾತ್ರಿ ೭.೩೦ಕ್ಕೆ ಯಕ್ಷಗಾನ ತಾಳಮದ್ದಲೆ,
ಎ.3 ಬೆಳ್ಳಗಿನ ಉತ್ಸವ, ಅಂಕುರ ಪೂಜೆ, ಸಂಜೆ ಸಾಮೂಹಿಕ ಲಲಿತಾ ಸಹಸ್ರನಾಮ ಪಠಣ, ರಾತ್ರಿ ಬಲಿ ಉತ್ಸವ, ಅಶ್ವತ್ಥಕಟ್ಟೆ ಪೂಜೆ, ವಸಂತಕಟ್ಟೆ ಪೂಜೆ, ಮೈಸಂದಾಯ ರಕ್ತೇಶ್ವರಿ ದೈವಗಳ ನೇಮೋತ್ಸವ, ರಾತ್ರಿ ಗಂಟೆ ೭.೩೦ಕ್ಕೆ ಕಮಲಾಕ್ಷ ಧರ್ಮಸ್ಥಳ ಮತ್ತು ಬಳಗದವರಿಂದ ಸುಮಧುರ ಸಂಗೀತ ಸಂಜೆ ನಡೆಯಲಿದೆ.
ಎ.4 ಬೆಳಿಗ್ಗೆ ಶ್ರೀ ದುರ್ಗಾಪರಮೇಶ್ವರಿ ದೇವಿ ದರ್ಶನ ಬಲಿ ಉತ್ಸವ, ರಾಜಾಂಗಣ ಪ್ರಸಾದ, ಬಟ್ಟಲು ಕಾಣಿಕೆ, ಮಹಾಪೂಜೆ, ರಾತ್ರಿ ಮಹಾರಥೋತ್ಸವ, ಕೊಡಮಣಿತ್ತಾಯ ದೈವದ ನೇಮೋತ್ಸವ, ಶಯನೋತ್ಸವ, ಸಂಜೆ ೫.೩೦ಕ್ಕೆ ಭಜನಾ ಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮ: ಸ್ಥಳೀಯರಿಂದ ನೃತ್ಯ ವೈವಿಧ್ಯ.
ಎ.5 ಬೆಳಿಗ್ಗೆ ಗಂಟೆ ೭ಕ್ಕೆ ಕವಾಟೋದ್ಘಾಟನೆ, ಮಹಾಪೂಜೆ, ರಾತ್ರಿ ದೇವರು ಆರಾಠಕ್ಕೆ ಹೊರಡುವುದು, ಪಿಲಿಚಾಮುಂಡಿ ದೈವದ ನೇಮ, ಅಶ್ವತ್ಥ ಕಟ್ಟೆ ಪೂಜೆ, ಅವಭೃತ ಸ್ನಾನ, ಬಟ್ಟಲು ಕಾಣಿಕೆ, ಧ್ವಜಾರೋಹಣ, ಮಹಾಪೂಜೆ, ಪ್ರಸಾದ ವಿತರಣೆ. ರಾತ್ರಿ ಗಂಟೆ ೯. ಕ್ಕೆ ಶ್ರೀ ವಿಷ್ಣು ಕಲಾವಿದೆರ್ ಮದ್ದಡ್ಕ ಅಭಿನಯದ ಕಾಶೀತೀರ್ಥ ಸಾಂಸಾರಿಕ ಹಾಸ್ಯ ತುಳುನಾಟಕ, ಹಾಗೂ ಪ್ರತಿದಿನ ಅನ್ನಸಂತರ್ಪಣೆ ನಡೆಯಲಿದೆ.
ಎ.6 ಬೆಳಿಗ್ಗೆ ಪೂಜೆ, ಸಂಪ್ರೋಕ್ಷಣೆ, ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ರಂಗಪೂಜೆ ಕಲ್ಕುಡ-ಕಲ್ಲುರ್ಟಿ ನೇಮೋತ್ಸವ ನಡೆಯಲಿದೆ.