ಅರಸಿನಮಕ್ಕಿ ವಲಯದ ಹತ್ಯಡ್ಕ ಬಿ ಕಾರ್ಯಕ್ಷೇತ್ರದಲ್ಲಿ ಮಾತೃಶ್ರೀ ಹೇಮಾವತಿ ಅಮ್ಮನವರ ಕನಸಿನ ಕಾರ್ಯಕ್ರಮವಾದ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಪ್ರತಿ ತಿಂಗಳು ಮಾಸಾಸನ ಪಡೆಯುತ್ತಿರುವ ಕಾಳಿ ರವರಿಗೆ ವಾತ್ಸಲ್ಯ ಮನೆ ನಿರ್ಮಾಣ ಮಾಡಿ ಹಸ್ತಾಂತರ ಕಾರ್ಯಕ್ರಮವನ್ನು ತಾಲೂಕಿನ ಗೌರವಾನ್ವಿತ ಯೋಜನಾಧಿಕಾರಿಯವರಾದ ಸುರೇಂದ್ರ ರವರ ಉಪಸ್ಥಿತಿಯಲ್ಲಿ ನಡೆಸಲಾಯಿತು.

ಊರಿನ ಗಣ್ಯರಾದ ಗಣೇಶ್ ರವರು ಮನೆ ಹಸ್ತಾಂತರ ಮಾಡುವ ಮೂಲಕ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ. ವಾಸಿಸಲು ಸರಿಯಾದ ಮನೆ ಇಲ್ಲದೆ ಜೋಪಡಿಯಲ್ಲಿ ವಾಸಿಸುತ್ತಿದ್ದ ಕಾಳಿಯವರಿಗೆ ಕ್ಷೇತ್ರದ ಮೂಲಕ ಮನೆ ನಿರ್ಮಾಣ ಮಾಡಿ ಕೊಟ್ಟಿದ್ದು ಡಾ| ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರು ಅದೆಷ್ಟೋ ಆಸಹಾಯಕರ ಪಾಲಿಗೆ ಬೆಳಕನ್ನು ನೀಡಿದ್ದಾರೆ ಎಂದು ತಿಳಿಸಿದರು. ಸಿ ಎ ಬ್ಯಾಂಕ್ ನಿರ್ದೇಶಕರು ಸ್ಥಳೀಯ ಗಣ್ಯರಾದ ಧರ್ಮರಾಜ್ ರವರು ದೀಪ ಬೆಳಗಿಸಿ ಕ್ಷೇತ್ರದಿಂದ ಗ್ರಾಮಕ್ಕೆ ವಾತ್ಸಲ್ಯ ಮನೆ ನಿರ್ಮಾಣ ಮಾಡಿದ್ದು ತುಂಬಾ ಅನುಕೂಲವಾಗಿದೆ ಎಂದು ತಿಳಿಸಿದರು.
ಜನಜಾಗೃತಿ ತಾಲೂಕು ವೇದಿಕೆ ಸದಸ್ಯರಾದ ಮಂಜುಳಾ ಕಾರಂತ್, ಚೆನ್ನಪ್ಪ ಗೌಡ, ಗಣ್ಯರಾದ ಮುರಳೀಧರ ಶೆಟ್ಟಿಗಾರ್, ಒಕ್ಕೂಟ ಅಧ್ಯಕ್ಷೆ ಶ್ರೀಮತಿ ಸುನಂದಾ, ಪದಾಧಿಕಾರಿಯವರಾದ ಸರೋಜಿನಿ ಮೇಲ್ವಿಚಾರಕರಾದ ಶಶಿಕಲಾ, ಸಮನ್ವಯಧಿಕಾರಿ ಮಧುರಾ ವಸಂತ್ ಜನಜಾಗೃತಿ ಗ್ರಾಮ ಸಮಿತಿ ಸದಸ್ಯರಾದ ನಾರಾಯಣ ಹಾಗೂ ಸೇವಾಪ್ರತಿನಿಧಿಗಳಾದ ರೂಪ ಯಮುನಾ ಗಾಯತ್ರಿ ಯವರು ಉಪಸ್ಥಿತರಿದ್ದರು.