
ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಧರ್ಮಸ್ಥಳ ಯುನಿಸೆಫ್ ಹೈದರಾಬಾದ್ ಇದರ ಜಂಟಿ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ ನೀರು ಉಳಿಸಿ ಮಹಾ ಅಭಿಯಾನ ನಡೆಯಿತು.
ಬೆಳ್ತಂಗಡಿ ತಾಲೂಕಿನಾದ್ಯಂತ ಶುದ್ಧ ನೀರು ಯಾಕೆ ಬೇಕು, ನೀರಿನ ನಿರ್ವಹಣೆಯ ಅವಶ್ಯಕತೆ ಏಕೆದೆ, ಪ್ರಸ್ತುತ ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ನೀರಿನ ಪರಿಸ್ಥಿತಿ ಹೇಗಿದೆ,ನೀರಿನ ಸಂರಕ್ಷಣೆಯಲ್ಲಿ ನಮ್ಮ ಹೊಣೆಗಾರಿಕೆ ಏನು, ನಾವು ಸಣ್ಣ ಮಟ್ಟದಲ್ಲಿ ಹೇಗೆ ನೀರನ್ನು ಉಳಿತಾಯ ಮಾಡಬಹುದು ಎನ್ನುವ ವಿಚಾರವಾಗಿ ಮನೆ ಯೋಜನಾಧಿಕಾರಿಗಳಾದ ಸುರೇಂದ್ರ ರವರು ಸವಿಸ್ತಾರವಾಗಿ ಮಾಹಿತಿಯನ್ನು ನೀಡಿದರು.
ಮನೆಯಲ್ಲಿ ಇಂಗು ಗುಂಡಿಯನ್ನು ನಿರ್ಮಾಣ ಮಾಡಿ ಮನೆಯ ಸುತ್ತಮುತ್ತಲಿನ ನೀರನ್ನು ಭೂಮಿಗೆ ಇಂಗಿಸುವಂತೆ ಮಾಡುವುದು. ಸಮುದಾಯದ ಭಾಗಗಳಲ್ಲಿ ಇಂಗು ಗುಂಡಿ ನಿರ್ಮಿಸಿ, ಆ ನೀರನ್ನು ಭೂಮಿಗೆ ಇಂಗಿಸುವಂತೆ ಮಾಡುವುದು.
ಟ್ಯಾಪ್ ತೋರದಂತೆ ನೋಡಿಕೊಳ್ಳುವುದು, ಮನೆಯಲ್ಲಿ ಹಲ್ಲುಜ್ಜುವಾಗ, ಸೇವಿಂಗ್ ಮಾಡುವಾಗ, ಸ್ನಾನ ಮಾಡುತ್ತಿರುವಾಗ ಟ್ಯಾಪಿನಲ್ಲಿ ನಿರಂತರವಾಗಿ ನೀರು ಸೋರದಂತೆ ನೋಡುತ್ತಿರುವುದು, ಗಿಡಗಳಿಗೆ ಯಥೇಚ್ಛವಾಗಿ ನೀರು ನೀಡದೆ ಇರುವುದು ಈ ರೀತಿಯಾಗಿ ನಾವು ನೀರನ್ನು ಉಳಿಕೆ ಮಾಡಬಹುದು ಎಂದು ತಿಳಿಸಲಾಯಿತು.
ಈ ಸಂದರ್ಭ ಕೃಷಿ ಮೇಲ್ವಿಚಾರಕರಾದ ರಾಮ್ ಕುಮಾರ್, ಕಚೇರಿ ಮ್ಯಾನೇಜರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.