22.8 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಂದಾರು ಸಿದ್ದಿವಿನಾಯಕ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

ಬಂದಾರು: ಸಿದ್ದಿವಿನಾಯಕ ಸಂಜೀವಿನಿ ಮಹಿಳಾ ಒಕ್ಕೂಟ ಬಂದಾರು ಇದರ ವಾರ್ಷಿಕ ಮಹಾಸಭೆ ಮಾ. 28 ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಚಿತ್ರರವರು ಅಧ್ಯಕ್ಷತೆ ವಹಿಸಿದ್ದರು. ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಉಪಾಧ್ಯಕ್ಷ ಪುಷ್ಪಾವತಿ ಬರಮೇಲು, ಸದಸ್ಯರಾದ ಅನಿತಾ ಉದಯ ಕುರುಡಂಗೆ, ಭಾರತಿ ಕೊಡಿಯೇಲು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ, ವಲಯ ಮೇಲ್ವಿಚಾರಕಿ ಶ್ರೀಮತಿ ವೀಣಾಶ್ರೀ, ಪದಾಧಿಕಾರಿಗಳಾದ ಸುರೇಖಾ, ಉಷಾ, ಪುಷ್ಪಾವತಿ, ಶೀಲಾವತಿ, ಭವ್ಯ, ತೀರ್ಥಶ್ರೀ,ಸುಚಿತ್ರ, ಗೀತಾ ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕರು ಮಹಾಸಭೆಯ ಬಗ್ಗೆ ಮತ್ತು ಸಂಜೀವಿನಿಯ ಧ್ಯೇಯ ಉದ್ದೇಶಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಂ.ಬಿ.ಕೆ ಭಾಗ್ಯಶ್ರೀ ಯವರು 2023 -24ರ ವಾರ್ಷಿಕ ವರದಿಯನ್ನು ಮಂಡನೆ ಮಾಡಿದರು. ಸಂಘದ ಸದಸ್ಯರಿಂದ ಅನುಮೋದನೆ ಪಡೆಯಲಾಯಿತು. 2023-24ರ ಜಮಾ ಮತ್ತು ಖರ್ಚಿನ ಬಗ್ಗೆ ಎಲ್.ಸಿ.ಆರ್.ಪಿ ಯಾದ ಹರ್ಷಿಣಿ ಯವರು ವರದಿ ಮಾಡಿದರು. ಅತ್ಯುತ್ತಮ ಸಂಘವನ್ನು ಗುರುತಿಸಿ ಸ್ಮರಣಿಕೆ ನೀಡಲಾಯಿತು. ಮಹಾಸಭೆಗೆ ಅತೀಹೆಚ್ಚು ಸದಸ್ಯರು ಭಾಗವಹಿಸಿದ 4 ಸಂಜೀವಿನಿ ಸ್ವಸಹಾಯ ಸಂಘಕ್ಕೆ ಸ್ಮರಣಿಕೆ ನೀಡಲಾಯಿತು. ಹಳೆ ಪದಾಧಿಕಾರಿಗಳಿಂದ ಹೊಸ ಪದಾಧಿಕಾರಿಗಳಿಗೆ ದಾಖಲಾತಿ ಹಸ್ತಾಂತರ ಮಾಡಿ ಪದಗ್ರಹಣ ಮಾಡಲಾಯಿತು. ಬೀಳ್ಕೊಟ್ಟ ಪದಾಧಿಕಾರಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಹಾಗೂ ಮಾಜಿ ಎಂ.ಬಿ.ಕೆ ಗೆ ಗೌರವ ಸ್ಮರಣಿಕೆ ನೀಡಿ ಸನ್ಮಾನ ಮಾಡಲಾಯಿತು. ಅದೇ ರೀತಿ ಶೀಲಾವತಿಯವರನ್ನು ಸನ್ಮಾನ ಮಾಡಲಾಯಿತು.

ಲಕ್ಷ್ಮೀ ಸ್ವಾಗತಿಸಿದರು. ಶ್ರೀಮತಿ ಭಾಗ್ಯಶ್ರೀ ಎಂ.ಬಿ.ಕೆ ನಿರೂಪಿಸಿದರು. ಶ್ರೀಮತಿ ಚಂದ್ರಿಕಾ ವಂದಿಸಿದರು. ಮಹಾಸಭೆಯ ಉಸ್ತುವಾರಿಯನ್ನು ಎಲ್.ಸಿ.ಆರ್. ಪಿ ಯಾದ ಪವಿತ್ರ ವಹಿಸಿದ್ದರು.

Related posts

ಅಗ್ರಿಲೀಫ್ ಸಂಸ್ಥೆಯಲ್ಲಿ ವಿವಿಧ ಉದ್ಯೋಗಾವಕಾಶ: ಆ.18ರಂದು ಒಷ್ಯನ್ ಪರ್ಲ್ ನಲ್ಲಿ ಮೆಗಾ ಉದ್ಯೋಗ ಮೇಳ

Suddi Udaya

ಜೆಸಿಐ ಕೊಕ್ಕಡ ಕಪಿಲ ಘಟಕದ ವತಿಯಿಂದ ಕಾರ್ಯತ್ತಡ್ಕ ಸ.ಪ್ರೌ. ಶಾಲೆಯಲ್ಲಿ ವಿವೇಕಾನಂದ ಜಯಂತಿ ಆಚರಣೆ

Suddi Udaya

ಕುತ್ಲೂರು ಅಂಗನವಾಡಿ ಕೇಂದ್ರಕ್ಕೆ ಟಿ.ವಿ. ಮತ್ತು ಇಂಟರ್ನೆಟ್ ಕೊಡುಗೆ

Suddi Udaya

ಉಜಿರೆ ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ ದೀಪ ಪ್ರಧಾನ ಕಾರ್ಯಕ್ರಮ

Suddi Udaya

ಮಡಂತ್ಯಾರು ಗ್ರಾ. ಪಂ. ನಲ್ಲಿ ಸ್ವಚ್ಛ ಸಂಕೀರ್ಣದ ಉದ್ಘಾಟಣೆ

Suddi Udaya

ಲಾಯಿಲ: ಶ್ರೀ ಮಹಮ್ಮಾಯಿ ಅಮ್ಮನವರ ಮಾರಿ ಪೂಜೋತ್ಸವ

Suddi Udaya
error: Content is protected !!