
ಅಳದಂಗಡಿ: ಕಳೆದ ಹಲವು ವರ್ಷಗಳಿಂದ ಉಜಿರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿಂಗ್ & ಕ್ವಿನ್ ಯುನಿಸೆಕ್ಸ್ ಸೆಲೂನ್ ಸಂಸ್ಥೆಯ ಸಹ ಸಂಸ್ಥೆಯಾದ ಲುಕ್ ಮಿ ಲೇಡಿಸ್ ಬ್ಯೂಟಿ ಝೋನ್,ಲೇಡಿಸ್ ಟೈಲರಿಂಗ್ ಮತ್ತು ತರಬೇತಿ ಕೇಂದ್ರ, ಟೈಲರಿಂಗ್ ಮೆಟಿರಿಯಲ್ಸ್ & ಎಂಬ್ರೈಡರಿ ವರ್ಕ್ಸ್ ಇದರ ಉದ್ಘಾಟನೆಯು ಅಳದಂಗಡಿ ಚರ್ಚ್ ಕಾಂಪ್ಲೆಕ್ಸ್ ನಲ್ಲಿ ಮಾ.28 ರಂದು ನಡೆಯಿತು.
ನೂತನ ಸಂಸ್ಥೆಗೆ ಗರ್ಡಾಡಿ ಚರ್ಚಿನ ಧರ್ಮಗುರುಗಳು ಆಗಮಿಸಿ ಪೂಜೆ ನೇರವೇರಿಸಿದರು. ನಂತರ ನಡೆದ ಸಮಾರಂಭದ ಉದ್ಘಾಟನೆಯನ್ನು ಪಿಲಿಪ್ಸ್ ಅಳದಂಗಡಿ ದೀಪ ಬೆಳಗಿಸಿ ನೆರವೇರಿಸಿ ಶುಭ ಕೋರಿದರು.

ಅಳದಂಗಡಿ ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಮೋನಿಕಾ ಡಿಸೋಜ ಮಾತನಾಡಿ ಸ್ವಾವಲಂಬಿ ಜೀವನಕ್ಕೆ ಒತ್ತು ನೀಡಿ ನೀನಾ ಅವರು ಬ್ಯೂಟಿ ಝೋನ್ ಸಂಸ್ಥೆಯನ್ನು ಹುಟ್ಟುಹಾಕಿ ಯಶಸ್ವಿಯಾಗಿದ್ದಾರೆ. ಆಗಮಿಸುವ ಗ್ರಾಹಕರಿಗೆ ನಗು ಮೊಗದ ಸೇವೆ ನಿರಂತರ ಇರಲಿ. ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಬೆಳ್ತಂಗಡಿ ಸುದ್ದಿ ಉದಯ ವಾರಪತ್ರಿಕೆಯ ಉಪ ಸಂಪಾದಕ ಸಂತೋಷ್ ಪಿ ಕೋಟ್ಯಾನ್,ಬ್ಯೂಟಿ ಪಾರ್ಲರ್ ಅಸೋಸಿಯೇಷನ್ ನ ಕಾರ್ಯದರ್ಶಿ ವಿನುಷಾ ಪ್ರಕಾಶ್, ಸಂಸ್ಥೆಯ ಮಾಲಕರ ತಾಯಿ ತ್ರೆಸಿಲ್ಲಾ ಪಿರೇರಾ ಉಪಸ್ಥಿತರಿದ್ದು ಶುಭ ಹಾರೈಸಿದರು.
ಸಂಸ್ಥೆಯ ಮಾಲಕಿ ನೀನಾ ಪೀಟರ್ ರೊಡ್ರಿಗಸ್ ಹಾಗೂ ಶಿಕ್ಷಕಿ ನಿಶಾ ಪಿರೇರಾ ಹಾಗೂ ಸಿಬ್ಬಂದಿಗಳು ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ, ಸತ್ಕರಿಸಿದರು.