24.2 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಧರ್ಮಸ್ಥಳಕ್ಕೆ ಭೇಟಿ ನೀಡಿದ ರಶ್ಯಾದ ಪ್ರವಾಸಿಗರು

ಧರ್ಮಸ್ಥಳ : ರಶ್ಯಾದಿಂದ ಏಳು ಜನ ಪ್ರವಾಸಿಗರ ತಂಡ ಧರ್ಮಸ್ಥಳಕ್ಕೆ ಮಾ.29 ರಂದು ಆಗಮಿಸಿದ್ದು, ದೇವರ ದರ್ಶನ ಮಾಡಿ, ಮಂಜೂಷಾ ವಿಂಟೇಜ್ ಕಾರುಗಳ ಸಂಗ್ರಹಾಲಯ, ಮಂಜೂಷಾ ವಸ್ತು ಸಂಗ್ರಹಾಲಯ, ಅನ್ನಪೂರ್ಣದಲ್ಲಿ ಅನ್ನದಾಸೋಹದ ವ್ಯವಸ್ಥೆ, ಬಾಹುಬಲಿ ಬೆಟ್ಟ, ಉದ್ಯಾನ ಮೊದಲಾದ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಮಂಜೂಷಾ ವಿಂಟೇಜ್ ಕಾರುಗಳ ಸಂಗ್ರಹಾಲಯದಲ್ಲಿ ಸಂರಕ್ಷಿಸಿ ಇಡಲಾದ ಹಳೆ ಕಾರುಗಳು, ಮಂಜೂಷಾ ವಸ್ತು ಸಂಗ್ರಹಾಲಯದಲ್ಲಿ ಸಂಗ್ರಹಿಸಿ, ಸಂರಕ್ಷಿಸಿ ಪ್ರದರ್ಶನಕ್ಕಿಟ್ಟ ಅಪೂರ್ವ ಕೆಮರಾಗಳು, ಹಳೆಯ ವಾಹನಗಳು, ನಾಣ್ಯಗಳು, ಜಾನಪದೀಯ ವಸ್ತುಗಳ ಸಂಗ್ರಹವನ್ನು ಕುತೂಹಲದಿಂದ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು
ಧರ್ಮಸ್ಥಳದಲ್ಲಿ ಸ್ವಚ್ಛತೆ, ಶಿಸ್ತು, ಅಚ್ಚುಕಟ್ಟು ಹಾಗೂ ಆತಿಥ್ಯದ ಬಗ್ಗೆ ಅಪಾರ ಸಂತಸ ಮತ್ತು ಶ್ಲಾಘನೆ ತಿಳಿಸಿದ್ದಾರೆ.

Related posts

ನಾರಾವಿ ಶ್ರೀ ಕೃಷ್ಣ ಹೋಟೆಲ್ ನ ಮಾಲಕ ಚಂದ್ರಕಾಂತ ಹೆಗ್ಡೆ ನಿಧನ

Suddi Udaya

ಚಾರ್ಮಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿಯನ್ನು ದ್ವಿಪಥವನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರದಿಂದ ರೂ. 343.74 ಕೋಟಿ ಅನುದಾನ ಬಿಡುಗಡೆ: ಸಂಸದ ಕ್ಯಾ. ಬ್ರಿಜೇಶ್ ಚೌಟ

Suddi Udaya

ಕೂಟ ಮಹಾ ಜಗತ್ತು ಬೆಳ್ತಂಗಡಿ ಅಂಗ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟ ಮತ್ತು ಕ್ಯಾಲೆಂಡರ್ ಬಿಡುಗಡೆ

Suddi Udaya

ದ.ಕ. ಜಿಲ್ಲೆಯಲ್ಲಿ ಅಡಿಕೆ ಕೋಕೋ ಮತ್ತು ಕಾಳುಮೆಣಸು ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಸೌಲಭ್ಯ ಕಲ್ಪಿಸಲು ಇದುವರೆಗೂ ಯಾವುದೇ ಕ್ರಮವಹಿಸದೆ ಇರುವುದರ ಕುರಿತು ಮುಖ್ಯಮಂತ್ರಿಗಳ ಹಾಗೂ ತೋಟಗಾರಿಕ ಸಚಿವರ ಗಮನ ಸೆಳೆದ ವಿ.ಪ ಸದಸ್ಯ ಪ್ರತಾಪ್ ಸಿಂಹ ನಾಯಕ್

Suddi Udaya

ಬಂದಾರು ಸ.ಹಿ. ಪ್ರಾ. ಶಾಲೆಯಲ್ಲಿ ಬೂತ್ ಸಂಖ್ಯೆ 217ರಲ್ಲಿ ತ್ರಾಂತಿಕ ದೋಷದಿಂದ ಮತದಾನ ಸ್ಥಗಿತ

Suddi Udaya

ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ. 8.08 ಲಕ್ಷ ಲಾಭ, ಶೇ. 8 ಡಿವಿಡೆಂಟ್ ಘೋಷಣೆ

Suddi Udaya
error: Content is protected !!