ಕನ್ಯಾಡಿ: ದೇವರಗುಡ್ಡೆ ಶ್ರೀ ಗುರುದೇವ ಮಠ, ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್ ನ 65ನೇ ವರ್ಷದ ಶ್ರೀ ರಾಮ ನಾಮ ಸಪ್ತಾಹ ಹಾಗೂ ಜಾತ್ರಾ ಮಹೋತ್ಸವ, ಬ್ರಹ್ಮರಥೋತ್ಸವನ್ನು ಮಾ.30ರಂದು ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜರವರ ದಿವ್ಯ ಸಾನ್ನಿಧ್ಯದಲ್ಲಿ ಶ್ರೀರಾಮ ನಾಮ ಸಪ್ತಾಹದ ಅಖಂಡ ನಂದಾದೀಪವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಹುಬ್ಬಳ್ಳಿ ಕೇಶಾವಪುರ ಅದ್ವೈತ ಪೀಠದ ಸ್ವಾಮೀಜಿ ಶ್ರೀ ದಯಾನಂದ ಬಾರ್ಕೂರು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ವಕೀಲರು, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್ ಪೂಜಾರಿ, ಬಿಜೆಪಿ ಜಿಲ್ಲಾ ನಾಯಕ ಹರಿಕೃಷ್ಣ ಬಂಟ್ವಾಳ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ನಿವೃತ್ತ ಎಸ್.ಪಿ., ಶ್ರೀ ಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಗೌರವಾಧ್ಯಕ್ಷ ಪೀತಾಂಬರ ಹೇರಾಜೆ, ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿಯ ಸಂಚಾಲಕ ಜಯಂತ್ ಕೋಟ್ಯಾನ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಸದಾನಂದ ಉಂಗಿಲಬೈಲು, ತುಕರಾಮ್ ಸಾಲ್ಯಾನ್, ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ್ ರಾವ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಚಿದಾನಂದ ಇಡ್ಯ, ಬಿ. ಭುಜಬಲಿ ಧರ್ಮಸ್ಥಳ,ಮಂಜುನಾಥ ಶೆಟ್ಟಿ ನಿಡಿಗಲ್, ಜಿ. ಪ. ಮಾಜಿ ಸದಸ್ಯೆ ನಮಿತಾ ತೋಟತ್ತಾಡಿ, ಪ್ರಶಾಂತ್ ಪಾರೆಂಕಿ, ರಾಜೇಶ್ ಪೂಜಾರಿ ಮೂಡುಕೋ ಡಿ, ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಸುವರ್ಣ ಕನ್ಯಾಡಿ, ಅಣ್ಣಿ ಪೂಜಾರಿ ಕಾಶಿಬೆಟ್ಟು,, ಚಿದಾನಂದ ಇಡ್ಯಾ, ತಿಮ್ಮಪ್ಪ ಗೌಡ ಬೆಳಾಲು, ಸುಜಾತಾ ಅಣ್ಣಿ ಪೂಜಾರಿ, ವಿನೋದಿನಿ ರಾಮಪ್ಪ, ಜಯಶಂಕರ್ ಎಂ. ಬಿ.,ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿ ಧರ್ಮಸ್ಥಳ ಗ್ರಾಮ ಸಮಿತಿ ಅಧ್ಯಕ್ಷ ಪುರುಷೋತ್ತಮ ಧರ್ಮಸ್ಥಳ, ಕಲ್ಮ೦ಜ ಗ್ರಾಮ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ, ಬೆಳಾಲು ಗ್ರಾಮ ಸಮಿತಿ ಅಧ್ಯಕ್ಷ ಜಾರಪ್ಪ ಪೂಜಾರಿ ಬೆಳಾಲು, ಪಿ., ಸುನೀಲ್ ಕನ್ಯಾಡಿ, ಗುರುದೇವ ಮಠದ ಟ್ರಷ್ಟಿ ತುಕಾರಾಮ ಸಾಲಿಯಾನ್, ರವೀಂದ್ರ ಪೂಜಾರಿ ಆರ್ಲ, ಚಂದಪ್ಪ ಪೂಜಾರಿ ಬಂದಾರು, ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಭಕ್ತರು, ಊರವರು, ರಥ ಬೀದಿ ವ್ಯಾಪಾರಸ್ಥರು ಉಪಸ್ಥಿತರಿದ್ದರು.
