ಗರ್ಡಾಡಿ: ನವಶಕ್ತಿ ಹರೀಶ್ ಶೆಟ್ಟಿ, ಗಣೇಶ್ ಗೌಡ ಉಜಿರೆ, ಹಾಗೂ ನವಶಕ್ತಿ ನಿಕ್ಷಿತ್ ಶೆಟ್ಟಿ ಅವರ ಮಾಲಕತ್ವದಲ್ಲಿ ನೂತನವಾಗಿ ಶುಭಾರಂಭಗೊಂಡ ಮದಿರಾ ಗ್ರ್ಯಾಂಡ್ ಬಾರ್ ಆಂಡ್ ರೆಸ್ಟೋರೆಂಟ್ ಇದರ ಉದ್ಘಾಟನಾ ಸಮಾರಂಭವು ಮಾ.30 ರಂದು ನಡೆಯಿತು.

ಶ್ರೀಮತಿ ಕಾಶಿ ಶೆಟ್ಟಿ ನವಶಕ್ತಿ ಮತ್ತು ಶ್ರೀಮತಿ ಗುಲಾಬಿ ಇಬ್ಬರು ತಾಯಂದಿರು ನೂತನ ಸಂಸ್ಥೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ,ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಹರೀಶ್ ಕುಮಾರ್, ಪ್ರಸಿದ್ದ ಗುಜರಾತ್ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ,ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ ಮೋಹನ್ ಕುಮಾರ್,ಪಡಂಗಡಿ ಗ್ರಾ.ಪಂ ಅಧ್ಯಕ್ಷ ಪ್ರಶಾಂತ್ ಸುವರ್ಣ,ಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ಜೈನ್, ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಅಜಿತ್ ಕುಮಾರ್ ಶೆಟ್ಟಿ, ಮಾಜಿ ಅಧ್ಯಕ್ಷ ಜಯರಾಮ್ ಶೆಟ್ಟಿ,ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ,ಜಯರಾಮ್ ಶೆಟ್ಟಿ ನವಶಕ್ತಿ,ಶ್ರೀನಿವಾಸ್ ಶೆಟ್ಟಿ ನವಶಕ್ತಿ,ಪ್ರಶಾಂತ್ ಶೆಟ್ಟಿ ನವಶಕ್ತಿ, ಆಗಮಿಸಿ ಶುಭ ಕೋರಿದರು.

ನೂತನವಾಗಿ ಪ್ರಾರಂಭಗೊಂಡ ಸಂಸ್ಥೆಗೆ ಹಲವಾರು ಪ್ರಮುಖರು ಆಗಮಿಸಿ ಶುಭ ಹಾರೈಸಿದರು.ಸಂತೋಷ್ ಶೆಟ್ಟಿ ಉಪ್ಪಡ್ಕ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು.