23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿವರದಿ

ಮದ್ದಡ್ಕ ತಾಯಿ ಪಿಲಿಚಾಮುಂಡಿ ದೈವದ ವರ್ಷಾವಧಿ ನೇಮೋತ್ಸವ

ಕುವೆಟ್ಟು: ಮದ್ದಡ್ಕ ತಾಯಿ ಪಿಲಿಚಾಮುಂಡಿ ದೈವದ ವರ್ಷಾವಧಿ ನೇಮೋತ್ಸವವು ಮಾ. 30 ರoದು ಜರಗಿತು.

ಸಂಜೆ ರಘುರಾಮ್ ಭಟ್ ಮಠ ಇವರ ಮನೆಯಿಂದ ದೈವದ ಭಂಡಾರದ ಮೆರವಣಿಗೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಮದ್ದಡ್ಕ ಇವರ ವಿಶೇಷವಾಗಿ ಸುಡು ಮದ್ದಿನ ಪ್ರದರ್ಶನದೊಂದಿಗೆ ದೈವಸ್ಥಾನಕ್ಕೆ ಭಂಡಾರ ಬಂದು ಪರ್ವ ಸೇವೆ ಭಕ್ತರಿಗೆ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆ , ನಂತರ ದೈವದ ನೇಮೋತ್ಸವ ಜರಗಿತು‌.

ಈ ಸಂದರ್ಭದಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರರು ಮೋಹನ್ ಕೆರ್ಮುಣ್ಣಾಯ ಮೈರಾರು ಮನೆ, ಶ್ರೀನಿವಾಸ ಅಮ್ಮುಣ್ಣಾಯ ಅಸ್ರಣ್ಣರು ಮೂಡುಮನೆ, ರಘುರಾಮ್ ಭಟ್ ಅಸ್ರಣ್ಣರು ಮಠ ಮನೆ ಹಾಗೂ ಊರ ಪರ ಊರ ಭಕ್ತಾದಿಗಳು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮ ಅನಂತ ಎಸ್ ಇರ್ವತ್ರಾಯ ತಂಗೋಯಿ ಇವರ ರಚನೆಯ ಬ್ರಹ್ಮದಂಡ ತುಳು ನಾಟಕ ಪ್ರದರ್ಶನಗೊಂಡಿತು.

Related posts

ಸಿರಿ ಸಂಸ್ಥೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಹಾಗೂ ಸಿರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Suddi Udaya

ಶಿಬಾಜೆ ಗ್ರಾಮ ಪಂಚಾಯತ್ ನ ಗ್ರಾಮಸಭೆ

Suddi Udaya

ನಾರಾವಿ ವಲಯ ಬಂಟರ ಸಂಘದ ಕುತ್ಲೂರು ಗ್ರಾಮ ಸಮಿತಿ ಸಭೆ

Suddi Udaya

ದ.ಕ ಜಿಲ್ಲೆಯಲ್ಲಿ ಕಾಡಿದ ಕುಡಿಯುವ ನೀರಿನ ಸಮಸ್ಯೆ ಜಿಲ್ಲಾಡಳಿತ ಕೂಡಲೇ ಶಾಸಕರುಗಳ ಸಭೆ ಕರೆಯುವಂತೆ ಎಂಎಲ್‌ಸಿ ಪ್ರತಾಪಸಿಂಹ ನಾಯಕ್ ಆಗ್ರಹ

Suddi Udaya

ಮಾಲಾಡಿ: ಬೆನ್ನುನೋವಿನ ಸಮಸ್ಯೆಯಿಂದ ಮನನೊಂದು ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ

Suddi Udaya

ಇಳಂತಿಲ : ಸಂವಿಧಾನ ಜಾಗೃತಿ ಜಾಥಾ

Suddi Udaya
error: Content is protected !!