ಅರಸಿನಮಕ್ಕಿ : ವಿಶ್ವ ಮಹಿಳಾ ದಿನ ಹಾಗೂ ಅರಸಿನಮಕ್ಕಿ ಗೊಂಚಲು ಸ್ತ್ರೀ ಶಕ್ತಿ ಸಂಘದ ಬೆಳ್ಳಿಹಬ್ಬದ ಪ್ರಯುಕ್ತ ಕುಂಟಾಲಪಳಿಕೆ ದ.ಕ ಜಿ.ಪಂ.ಹಿ.ಪ್ರಾ ಶಾಲಾ ವಠಾರದಲ್ಲಿ ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಮಾ.29 ರಂದು ಆಯೋಜಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನುಗೊಂಚಲು ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಶ್ರೀಮತಿ ದಿವ್ಯಜ್ಯೋತಿ ದೀಪ ಪ್ರಜ್ವಲನೆ ಮಾಡುವುದರ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು.
ವೇದಿಕೆಯಲ್ಲಿ ಸಿಹೆಚ್ ಒ ಶ್ರೀಮತಿ ಅಂಬಲಿ ಜೇಕಬ್ , ಶ್ರೀಮತಿ ವಿದ್ಯಾ ದುಗ್ಗಪ್ಪ ಗೌಡ, ಪೋಷಕರು, ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ಸತ್ಯಪ್ರಭಾ ಎಸ್ ಕುಂಟಾಲಪಳಿಕೆ, ಶ್ರೀಮತಿ ವಿಜಯ ಅರಸಿನಮಕ್ಕಿ, ಶ್ರೀಮತಿ ಸುನಂದ ನಾವಳೆ, ಶ್ರೀಮತಿ ಭಾರತಿ ಹೊಸ್ತೋಟ, ಉಪಸ್ಥಿತರಿದ್ದರು.
ಶ್ರೀಮತಿ ಗೀತಾ ಪ್ರಾರ್ಥಿಸಿ, ಶ್ರೀಮತಿ ಉಷಾ ಸ್ವಾಗತಿಸಿ, ಶ್ರೀಮತಿ ಸುರೇಖಾ ವಂದಿಸಿದರು, ಶ್ರೀಮತಿ ಅಖಿಲಾ ಕಾರ್ಯಕ್ರಮ ನಿರೂಪಿಸಿದರು. ಪೋಷಿತ್ ಸ್ಪರ್ಧೆ ನಡೆಸುವಲ್ಲಿ ಸಹಕರಿಸಿದರು. ಕುಂಟಾಲಪಳಿಕೆ ಅಂಗನವಾಡಿ ಕೇಂದ್ರದ ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಊಟದ ವ್ಯವಸ್ಥೆಯನ್ನು ನಿರ್ವಹಿಸಿದರು.