ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್, ಸಂತ ಪ್ರಾನ್ಸಿಸ್ ಸಾವೆರ ವಾಳೆಯ ವತಿಯಿಂದ “ಪರಿಸರ ಸ್ವಚ್ಚತಾ ಆಂದೋಲನ” ವನ್ನು ಸವಣಾಲು ರಸ್ತೆಯ ಪಲ್ತಡ್ಕ ದಿಂದ ಕರ್ನೊಡಿ ವರೆಗೆ ಮಾ.30 ರಂದು ನಡೆಸಲಾಯಿತು.
ಚರ್ಚಿನ ಪ್ರದಾನ ಧರ್ಮಗುರುಗಳಾದ ವಂ. ಸ್ವಾಮಿ ವಾಲ್ಟರ್ ಡಿಮೆಲ್ಲೊ ರವರ ಮಾರ್ಗದರ್ಶನದಲ್ಲಿ ಶ್ರೀಮತಿ ಲಿಲ್ಲಿ ಲೋಬೊ ವಾಳೆಯ ಗುರ್ಕಾರ್ ರವರ ಮುಂದಾಳತ್ವದಲ್ಲಿ ವಿಲ್ಸನ್ ಪಿಂಟೊ ಮತ್ತು ಶ್ರೀಮತಿ ಲವೀನಾ ಬೆನ್ನಿಸ್ ಪ್ರತಿನಿಧಿಗಳೊಂದಿಗೆ ಸದಸ್ಯರು ಸಹಕರಿಸಿದರು.