ಲಾಯಿಲ : ಇಲ್ಲಿಯ ಶ್ರೀ ಕ್ಷೇತ್ರ ಪಿಲಿಪಂಜರದಲ್ಲಿ ಸಾನಿಧ್ಯ ದೈವಗಳ ವಾರ್ಷಿಕ ಪ್ರತಿಷ್ಠಾಪನಾ ಮಹೋತ್ಸವ ಮಾ.31 ರಂದು ನಡೆಯಿತು.


ಬೆಳಗ್ಗೆ ಗಣಹೋಮ, ಸಾಮೂಹಿಕ ಮೃತ್ಯುಂಜಯ ಹೋಮ, ನವಕ ಕಲಶ ಹಾಗೂ ಪಿಲಿಚಾಮುಂಡಿ ಬಾಲಾಲಯದಲ್ಲಿ ಪ್ರತಿಷ್ಠಾಪನೆ, ಕ್ಷೇತ್ರದ ದೈವಗಳಿಗೆ ಪರ್ವ ಸೇವೆ, ಹಾಗೂ ಹೂವಿನ ಪೂಜೆ ಜರುಗಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ, ಜೀರ್ಣೋದ್ಧಾರ ಸಮಿತಿ ಹಾಗೂ ಬೈಲುವಾರು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.