24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಅಂಡಿಂಜೆಯಲ್ಲಿ ಬೈಕ್ ಅಪಘಾತ: ಅಂಡಿಂಜೆ ನಿವಾಸಿ ಮಂಗಳಾದೇವಿ ಮೇಳದ ಭಾಗವತ ಸತೀಶ್ ಆಚಾರ್ಯ ಮೃತ್ಯು

ಬೆಳ್ತಂಗಡಿ: ಅಂಡಿಂಜೆ ಗ್ರಾಮದ ಪಿಯೂಲಿರು ಮನೆ ನಿವಾಸಿ ದಿ| ಅಣ್ಣಿ ಆಚಾರ್ಯ ಮತ್ತು ಶ್ರೀಮತಿ ವಿನೋದ ಆಚಾರ್ಯ ದಂಪತಿ ಪುತ್ರ,ಮಂಗಳಾದೇವಿ ಯಕ್ಷಗಾನ ಮೇಳದ ಯಕ್ಷಗಾನ ಭಾಗವತರಾದ ಸತೀಶ್ ಆಚಾರ್ಯ ಅಂಡಿಂಜೆ (40ವ) ರವರು ಮಾ.31ರಂದು ಇಂದು ಮುಂಜಾನೆ 4 ಗಂಟೆಗೆ ಅಂಡಿಂಜೆಯ ಕಿಲಾರ ಮಾರಿಕಾಂಭ ದೇವಸ್ಥಾನದ ತಿರುವು ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.


ಸುಳ್ಯದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮವನ್ನು ಮುಗಿಸಿ ಮುಂಜಾನೆ 4 ಗಂಟೆಗೆ ಸತೀಶ್ ಆಚಾರ್ಯ ಅವರು ತಮ್ಮ ಬೈಕ್‌ನಲ್ಲಿ ಅಂಡಿಂಜೆಗೆ ಬರುತ್ತಿರುವ ಸಂದರ್ಭದಲ್ಲಿ ಅಂಡಿಂಜೆ ಕಿಲಾರ ಮಾರಿಗುಡಿ ದೇವಸ್ಥಾನದ ಸಮೀಪದ ತಿರುವು ರಸ್ತೆಯಲ್ಲಿ ಎದುರಿನಿಂದ ಬರುತ್ತಿದ್ದ ಬೈಕ್ ಹಾಗೂ ಇವರು ಹೋಗುತ್ತಿದ್ದ ಬೈಕ್ ಪರಸ್ಪರ ಡಿಕ್ಕಿ ಹೊಡೆದುಕೊಂಡು ಈ ದುರ್ಘಟನೆ ನಡೆದಿದೆ. ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟರು. ಎದುರಿನಿಂದ ಬರುತ್ತಿದ್ದ ಬೈಕ್‌ನಲ್ಲಿದ್ದವರಿಗೂ ಗಾಯವಾಗಿದೆ.

ಮೃತರು ತಾಯಿ, ಸಹೋದರಿ, ಸಹೋದರ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ. ಈ ಬಗ್ಗೆ ವೇಣೂರು ಪೋಲಿಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

Related posts

ಅ.28 : ಈ ವರ್ಷದ ಕೊನೆಯ ‘ಚಂದ್ರಗ್ರಹಣ’ : 30 ವರ್ಷಗಳಿಗೊಮ್ಮೆ ಸಂಭವಿಸುವ ಅಪರೂಪದ ಗ್ರಹಣ

Suddi Udaya

ಮರೋಡಿ: 9ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ವರ ಪೂಜೆ

Suddi Udaya

ಕುತ್ಲೂರು: ಸೇತುವೆಗೆ ಅಡ್ದಲಾಗಿ ಬಿದ್ದಿದ್ದ ಮರದ ದಿಮ್ಮಿಯನ್ನು ತೆರವುಗೊಳಿಸಿದ ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ನ ಯುವಕರು

Suddi Udaya

ರಾಷ್ಟ್ರೀಯ ವಾಲಿಬಾಲ್ ಪಂದ್ಯಾಟ: ಮುಂಡಾಜೆ ಪ.ಪೂ. ಕಾಲೇಜಿನ ಬಾಲಕಿಯರ ತಂಡಕ್ಕೆ ಬೆಳ್ಳಿ ಪದಕ

Suddi Udaya

ಬಳಂಜ: ಪುಣ್ಕೆದೊಟ್ಟು ನಿವಾಸಿ ಚಂದ್ರು ನಿಧನ

Suddi Udaya

ಎಲ್ ಸಿ ಆರ್ ವಿದ್ಯಾ ಸಂಸ್ಥೆಯಲ್ಲಿ ಎಸ್.ಎಸ್.ಎಲ್.ಸಿ.ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

Suddi Udaya
error: Content is protected !!