May 20, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ರೂ. 3 ಕೋಟಿ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಫುಟ್ಬಾಲ್ ಕ್ರೀಡಾಂಗಣಕ್ಕೆ ಶಾಸಕ ಹರೀಶ್ ಪೂಂಜರಿಂದ ಶಿಲಾನ್ಯಾಸ

ಮುಂಡಾಜೆ: ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ರೂ. 3 ಕೋಟಿ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಫುಟ್ಬಾಲ್ ಕ್ರೀಡಾಂಗಣದ ಶಿಲಾನ್ಯಾಸ ಕಾರ್ಯಕ್ರಮವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರು ಮಾ.31ರಂದು ನೆರವೇರಿಸಿದರು.

ಈ ಸಂದರ್ಭದಲ್ಲಿ ಮುಂಡಾಜೆ ಗ್ರಾಪಂ ಅಧ್ಯಕ್ಷ ಗಣೇಶ ಬಂಗೇರ, ಉಪಾಧ್ಯಕ್ಷೆ ಸುಮಲತಾ ಶೆಟ್ಟಿ, ಸದಸ್ಯರು, ಗ್ರಾಪಂ ಮಾಜಿ ಅಧ್ಯಕ್ಷ ರಾಮಣ್ಣ ಶೆಟ್ಟಿ, ರಂಜಿನಿ ರವಿ, ತಾ.ಪಂ. ಮಾಜಿ ಸದಸ್ಯರಾದ ಕೊರಗಪ್ಪ ಗೌಡ ಅರಣಪಾದೆ, ಲೀಲಾವತಿ, ಮುಂಡಾಜೆ ಪ್ಯಾಕ್ಸ್ ನಿರ್ದೇಶಕರಾದ ಕಜೆ ವೆಂಕಟೇಶ್ವರ ಭಟ್, ಅಶ್ವಿನಿ ಎ. ಹೆಬ್ಬಾರ್, ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಜಯಂತ್, ಹಿರಿಯರಾದ ಅಡೂರು ವೆಂಕಟ್ರಾಯ, ಗೋಪಾಲಕೃಷ್ಣ ರಾವ್ ಅಡೂರು, ಶಾಲೆಯ ಪ್ರಿನ್ಸಿಪಾಲ್ ಮುರಳೀಧರ, ಗುತ್ತಿಗೆದಾರ ಕಂಪನಿಯ ಅವಿನಾಶ್ ಹೈದರಾಬಾದ್ ಮತ್ತಿತರರು ಉಪಸ್ಥಿತರಿದ್ದರು.

ಮುಂಡಾಜೆ ಪ್ಯಾಕ್ಸ್ ನಿರ್ದೇಶಕ ಚೆನ್ನಕೇಶವ ಅರಸಮಜಲು ಕಾರ್ಯಕ್ರಮ ನಿರೂಪಿಸಿದರು.
ಗ್ರಾಪಂ ಸದಸ್ಯೆ ರಂಜಿನಿ ವಂದಿಸಿದರು.

Related posts

ಹೃದಯಾಘಾತದಿಂದ ಗರ್ಡಾಡಿಯ ಪದ್ಮಪ್ರಸಾದ್ ನಿಧನ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಬೆಳ್ತಂಗಡಿ ಮಹಿಳಾ ಬಿಲ್ಲವ ವೇದಿಕೆ ಸದಸ್ಯರ ಭೇಟಿ

Suddi Udaya

ಕಾಜೂರು ಮಹಿಳಾ ಶರೀಅತ್ ಕಾಲೇಜು ಪದವಿ ಪ್ರದಾನ ಸಮಾರಂಭ: 14 ಮಂದಿಗೆ ‘ಅರ್ರಾಹಿಮ’ ಪದವಿ ಪ್ರದಾನ

Suddi Udaya

ಬೆಳ್ತಂಗಡಿ ಯುವ ಮೋರ್ಚಾ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಗುರುವಾಯನಕೆರೆ ಹುತಾತ್ಮ ಯೋಧ ಏಕನಾಥ್ ಶೆಟ್ಟಿ ರವರ ಪ್ರತಿಮೆಗೆ ಮಾಲಾರ್ಪಣೆ, ನುಡಿನಮನ

Suddi Udaya

ಕಳೆಂಜ ಉಪವಲಯ ಅರಣ್ಯಾಧಿಕಾರಿ ಪ್ರಶಾಂತ್ ವರ್ಗಾವಣೆ

Suddi Udaya

ಶಿಬಾಜೆ ಸ.ಕಿ. ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya
error: Content is protected !!