April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ. ಬಿ.ಎಸ್.ಇ) ಶಾಲೆಯಲ್ಲಿ ಬೇಸಿಗೆ ಶಿಬಿರದ ಉದ್ಘಾಟನೆ

ಉಜಿರೆ : “ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರತರುವ ವೇದಿಕೆ ಬೇಸಿಗೆ ಶಿಬಿರ” ಎಂದು ಬೆಳ್ತಂಗಡಿಯ ಸುದ್ದಿ ಉದಯ ಪತ್ರಿಕೆಯ ಉಪ ಸಂಪಾದಕರಾದ ಸಂತೋಷ್.ಪಿ ಕೋಟ್ಯಾನ್ ಬಳಂಜ ಹೇಳಿದರು.

ಇವರು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಉಜಿರೆ ಇಲ್ಲಿ ಆಯೋಜಿಸಿದ್ದ ಬೇಸಿಗೆ ಶಿಬಿರದ ಉದ್ಘಾಟಕರಾಗಿ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಬೇಸಿಗೆ ಶಿಬಿರದಲ್ಲಿ ವಿದ್ಯಾರ್ಥಿಗಳು ಕರಕುಶಲ ವಸ್ತುಗಳ ತಯಾರಿ, ಭಜನೆ, ನಾಟಕ ಪೂರ್ವರಂಗ ತಯಾರಿ, ಚಿತ್ರಕಲೆ, ಮುದ್ರಣ ಮಾಧ್ಯಮ, ಕ್ರೀಡೆ, ಅಡುಗೆ, ಸಾಮರ್ಥ್ಯ ವೃದ್ಧಿ ಮುಂತಾದ ಅನೇಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಮನ್ಮೋಹನ್ ನಾಯಕ್ ಕೆ.ಜಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಶಿಕ್ಷಕಿ ಶಾಂಟಿ ಜಾರ್ಜ್ ನಿರೂಪಿಸಿ, ಮುಖ್ಯೋಪಾಧ್ಯಾಯ ಮನ್ಮೋಹನ್ ನಾಯಕ್ ಕೆ.ಜಿ ಸ್ವಾಗತಿಸಿ, ಶಿಕ್ಷಕಿ ಮಧುರ ವಂದಿಸಿದರು.

Related posts

ಶಿರಸಿಯ ನಾರಾಯಣ ಆರ್ ಕೋಮಾರ್ ರವರಿಂದ ಸೇವಾಧಾಮಕ್ಕೆ ಧನ ಸಹಾಯ

Suddi Udaya

ಬೆಳಾಲು: ಎರಡು ಗುಂಪುಗಳ ನಡುವೆ ಗಲಾಟೆ: ಪರಸ್ಪರ ಆರೋಪ ಹೊರಿಸಿ ಪೊಲೀಸರಿಗೆ ದೂರು

Suddi Udaya

ಮದ್ದಡ್ಕ ಶ್ರೀರಾಮ ಸೇವಾ ಸಮಿತಿ, ವಿಶ್ವ ಹಿಂದೂ ಪರಿಷತ್ ಭಜರಂಗದಳ ಮದ್ದಡ್ಕ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯಕ್ತ ಮೊಸರು ಕುಡಿಕೆ ಉತ್ಸವ

Suddi Udaya

ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ- ಗಾಯಾಳು ಪುತ್ತೂರು ಆಸ್ಪತ್ರೆಗೆ ದಾಖಲು

Suddi Udaya

ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವ ಸ್ಥಾನ ಅನರ್ಹತೆಗೊಳಿಸಿರುವುದಕ್ಕೆ ಖಂಡನೆ: ಬೆಳ್ತಂಗಡಿ ಮೂರು ಮಾರ್ಗದ ಬಳಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಮೌನ ಪ್ರತಿಭಟನೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಐತಿಹಾಸಿಕ ಕಾರ್ಯಕ್ರಮ: ಸ್ವಸಹಾಯ ಸಂಘಗಳಿಗೆ ರೂ.605 ಕೋಟಿ ಲಾಭಾಂಶ ವಿತರಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

Suddi Udaya
error: Content is protected !!