April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕಲ್ಮಂಜ: ಸಿದ್ದಬೈಲು ಸ.ಹಿ ಪ್ರಾ. ಶಾಲೆಯ ನಿವೃತ್ತ ಶಿಕ್ಷಕ ಶಂಕರ ಎನ್ ತಾಮನ್ಕರ್ ರವರಿಗೆ ಬೀಳ್ಕೊಡುಗೆ ಮತ್ತು ಅಭಿನಂದನಾ ಸಮಾರಂಭ

ಕಲ್ಮಂಜ : ಸ.ಹಿ ಪ್ರಾ ಶಾಲೆ ಸಿದ್ದಬೈಲು ಪರಾರಿಯಲ್ಲಿ ಕಳೆದ 9 ವರ್ಷಗಳಿಂದ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿ ಇತ್ತೀಚೆಗೆ ನಿವೃತ್ತರಾದ ಶಿಕ್ಷಕ ಕವಿ ಕಲಾವಿದ ಶಂಕರ ಎನ್ ತಾಮನ್ಕರ್ ಇವರ ಬೀಳ್ಕೊಡುಗೆ ಮತ್ತು ಅಭಿನಂದನಾ ಸಮಾರಂಭವು ಮಾ. 29 ರಂದು ಸಿದ್ದಬೈಲು ಶಾಲೆಯಲ್ಲಿ ವಿಜ್ರಂಭಣೆಯಿಂದ ಜರುಗಿತು.

ಏಳನೇ ತರಗತಿ ವಿದ್ಯಾರ್ಥಿಗಳ ವಿದಾಯ ಕೂಟವೂ ಇದರೊಂದಿಗೆ ಜರುಗಿತು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ದಿನೇಶ ಗೌಡ ,ಎಸ್ ಡಿ ಎಂ ಸಿ ಯ ಎಲ್ಲಾ ಸದಸ್ಯರು, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಧರ್ಣಮ್ಮ ,ಊರವರು, ಮಕ್ಕಳ ಪೋಷಕರು, ಹಳೆ ವಿದ್ಯಾರ್ಥಿಗಳು, ಸಹ ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಅವರನ್ನು ಅಭಿನಂದಿಸಿ ನೆನಪಿನ ಕಾಣಿಕೆಯನ್ನು ನೀಡಲಾಯಿತು. ಮಕ್ಕಳೇ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಶ್ರಿಮತಿ ಧರ್ಣಮ್ಮ, ಮಮತಾ ಮತ್ತು ವಿದ್ಯಾರ್ಥಿಗಳು ಅಭಿನಂದನಾ ಭಾಷಣ ಮಾಡಿದರು. ನಂತರ ವಿದ್ಯಾರ್ಥಿಗಳಿಂದ ಮನೋರಂಜನೆ ಕಾರ್ಯಕ್ರಮ ನಡೆಯಿತು.

Related posts

ಮಾಲಾಡಿ: ಕೊಲ್ಪದಬೈಲುನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಕಾರು

Suddi Udaya

ಡಾ ರವೀಶ್ ಪಡುಮಲೆಗೆ ಅಕ್ಷಯ ಗುರು ಪುರಸ್ಕಾರ

Suddi Udaya

ಪಣಕಜೆಯ ಅರ್ಕಜೆ ಬಳಿ ಮನೆಗೆ ಗುಡ್ಡ ಕುಸಿದು ಹಾನಿ: ಮಡಂತ್ಯಾರು ಶೌರ್ಯ ಘಟಕದ ಸ್ವಯಂ ಸೇವಕರಿಂದ ಮಣ್ಣು ತೆರವು ಕಾರ್ಯ

Suddi Udaya

ಬಳಂಜ ಗ್ರಾ.ಪಂ. ನ ಅಭಿವೃದ್ಧಿ ಕೆಲಸ ಕಾರ್ಯಗಳಿಗೊಳಿದ ಪ್ರತಿಷ್ಠಿತ `ಗಾಂಧಿ ಗ್ರಾಮ’ ಪುರಸ್ಕಾರ

Suddi Udaya

ಮಾಯಿಲ ಕೋಟೆ ಸೀಮೆ ದೈವಸ್ಥಾನದಲ್ಲಿ ಸಂಕ್ರಮಣ ಪೂಜೆ ಹಾಗೂ ಕಲ್ಲುರ್ಟಿ ಅಗೇಲು ಸೇವೆ

Suddi Udaya

ಕೊಕ್ಕಡ ಗ್ರಾ.ಪಂ. ನಿಂದ ಬ್ಯಾಂಕ್ ಹ್ಯಾಕರ್ ಗಳು ಹ್ಯಾಕ್ ಮಾಡಿ ಹಣ ಎಗರಿಸುವುದನ್ನು ತಡೆಯುವ ಸಲುವಾಗಿ ಬ್ಯಾಂಕ್‌ನ ಪ್ರತಿನಿಧಿಗಳೊಂದಿಗೆ ತುರ್ತು ಸಭೆ

Suddi Udaya
error: Content is protected !!