ಗುರುವಾಯನಕೆರೆ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುರುವಾಯನಕೆರೆ ಎಲ್ ಕೆ ಜಿ ಮತ್ತು ಯುಕೆಜಿ ಮಕ್ಕಳ ರೆಡ್ ಕಲರ್ ಸೆಲೆಬ್ರೇಶನ್ ನಡೆಯಿತು.

ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಹಾಜಿ ಅಬ್ದುಲ್ ಲತೀಫ್ ಅಧ್ಯಕ್ಷತೆ ವಹಿಸಿದರು. ಎಲ್ ಕೆ ಜಿ ಪೋಷಕರಾದ ಮಹಮ್ಮದ್ ಸಾದಿಕ್, ಜಾನ್ಸನ್ ಮೆಲ್ವಿನ್ ಪಿರೇರಾ , ಕಿರಣ್ ಭಟ್ ಹಾಗೂ ಎಸ್.ಡಿ.ಎಮ್.ಸಿ ಸದಸ್ಯರಾದ ಅಬ್ದುಲ್ ರಹಿಮಾನ್ ಮಹಮ್ಮದ್ ಹನೀಫ್, ಹಾಗೂ ಎಲ್ ಕೆ ಜಿ ಮತ್ತು ಯುಕೆಜಿಯ ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಉಮಾ. ಎನ್ ಶಾಲಾ ಮಾಹಿತಿಯನ್ನು ನೀಡಿದರು. ಯುಕೆಜಿ ಶಿಕ್ಷಕಿ ಶೀಭಾ ಮೆರ್ಲಿನ್ ಸ್ವಾಗತಿಸಿದರು. ಆಯಾ ಶ್ವೇತ ಮಕ್ಕಳನ್ನು ತಯಾರುಗೊಳಿಸಿದರು. ಮಕ್ಕಳಿಂದ ಹಾಡು ಅಭಿನಯ ಗೀತೆಯನ್ನು ಮಾಡಲಾಯಿತು. ಮಕ್ಕಳ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಪೋಷಕರಿಗೆ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು. ರೆಡ್ ಕಲರ್ ವಸ್ತುಗಳನ್ನು ಪೋಷಕರು ತಂದು ನೀಡಿದರು. ಎಸ್ ಡಿ ಎಂ ಸಿ ಅಧ್ಯಕ್ಷರು ಒಂದು ತರಗತಿ ಕೊಠಡಿ ನಿರ್ಮಾಣ ಮಾಡಲು ಎಲ್ಲಾ ದಾನಿಗಳ ಸಹಕಾರವನ್ನು ಕೋರಿದರು. ಮುಖ್ಯ ಶಿಕ್ಷಕಿ ಉಮಾ. ಎನ್ ಧನ್ಯವಾದವಿತ್ತರು.