
ವೇಣೂರು: ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ಭಜನಾ ಮಂಡಳಿ, ಜೈ ಶ್ರೀರಾಮ್ ಗೆಳೆಯರ ಬಳಗ, ದೇಲಂಪುರಿ ಕರಿಮಣೇಲು ಇವರ ವತಿಯಿಂದ ನಿರ್ಮಿಸಲಾದ ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನದ ಸ್ವಾಗತ ಗೋಪುರ ಉದ್ಘಾಟನೆಯು ಶಾಸಕ ಹರೀಶ್ ಪೂಂಜ ಮಾ. 30ರಂದು ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನ ಪ್ರಧಾನ ಅರ್ಚಕರು ಚಂದ್ರಶೇಖರ ಅಸ್ರಣ್ಣರು, , ವೇಣೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಮಲ್ಲಿಕಾ ಕಾಶಿನಾಥ್, ಸುಕೀರ್ತಿರಾಜ್ ಜೈನ್ ಚೆನ್ನೈ ಪೆರಿಂಜೆ ಮಾಗಣೆ ಗುತ್ತು, ಸಂತೋಷ್ ಹೆಗ್ಡೆ ಇಸ್ರೇಲ್, ಪಾಲೆಂಜ ಕರಿಮಣೇಲು, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯರಾಮ್ ಶೆಟ್ಟಿ, ವೇಣೂರು ಪ್ರಾ. ಕೃ.ಪ.ಸ. ಸಂಘ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ., ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಶ್ರೀಕೃಷ್ಣ ಭಟ್, ಭಾಸ್ಕರ್ ಪೈ, ಉದ್ಯಮಿಗಳು ವೇಣೂರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶ್ರೀ ಮಹಾದೇವ ಮಹಾಗಣಪತಿ ಭಜನಾ ಮಂಡಳಿ, ಜೈ ಶ್ರೀರಾಮ್ ಗೆಳೆಯರ ಬಳಗದ ಸದಸ್ಯರು, ಊರವರು ಉಪಸ್ಥಿತರಿದ್ದರು.