ಉಜಿರೆ: ಸುರತ್ಕಲ್ ಗೋವಿಂದ ದಾಸ ಕಾಲೇಜು ಹಾಗೂ ಸುರತ್ಕಲ್ ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣ ವೇದಿಕೆ ಆಯೋಜನೆ ಮಾಡಿರುವ “ಯಕ್ಷಯಾನ-2025” ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆಯಲ್ಲಿ ಉಜಿರೆ ಎಸ್.ಡಿ.ಎಂ ಕಾಲೇಜು ಯಕ್ಷಗಾನ ಕಲಾಕೇಂದ್ರದ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

ಯಕ್ಷಗುರು ಅರುಣ್ ಕುಮಾರ್ ಧರ್ಮಸ್ಥಳ ನಿರ್ದೇಶನದ ಎಸ್.ಡಿ.ಎಂ. ತಂಡ “ಸುಧನ್ವ ಮೋಕ್ಷ” ಪ್ರಸಂಗವನ್ನು ಪ್ರಸ್ತುತ ಪಡಿಸಿ ಪ್ರಥಮ ಸ್ಥಾನ ಪಡೆದು, ನಾಲ್ಕು ವೈಯಕ್ತಿಕ ಬಹುಮಾನವನ್ನು ಪಡೆದುಕೊಂಡಿದೆ.
ಪುಂಡುವೇಷ ಪ್ರಥಮ ಸುಬ್ರಮಣ್ಯ ಭಟ್ (ಸುಧನ್ವ), ರಾಜವೇಷ ದ್ವಿತೀಯ ಸೌರವ್ ಶೆಟ್ಟಿ (ಅರ್ಜುನ), ಸ್ತ್ರೀ ವೇಷ ಪ್ರಥಮ ಸಾಕ್ಷಿ (ಪ್ರಭಾವತಿ), ಹಾಸ್ಯ ಪ್ರಥಮ ಅಮೋಘ ಶಂಕರ(ದೂತ) ವೈಯಕ್ತಿಕ ಬಹುಮಾನ. ಮಿಥುನ್ ರಾಜ್ (ಹೃಷಕೇತು), ವರ್ಷಿತ್(ಹಂಸಧ್ವಜ), ಹಾರ್ದಿಕ್ (ಅನುಸಾಲ್ವ), ಪ್ರಾವಿಣ್ಯ (ಕೃಷ್ಣ). ರಂಗಸಜ್ಜಿಕೆಯಲ್ಲಿ ಕು. ಮೋನಿಷಾ ಹಾಗೂ ಕು. ಮನಸ್ವಿ ಸಹಕರಿಸಿದರು.
ಹಿಮ್ಮೇಳದಲ್ಲಿ ಭಾಗವತರಾಗಿ ಗಿರೀಶ್ ರೈ ಕಕ್ಕೆಪದವು, ಚೆಂಡೆಯಲ್ಲಿ ಆನಂದ ಗುಡಿಗಾರ್ ಕೆರ್ವಾಶೆ, ಮದ್ದಳೆಯಲ್ಲಿ ಆದಿತ್ಯ ಹೊಳ್ಳ ಭಾಗವಹಿಸಿದರು.