ಬಂದಾರು: ಇಲ್ಲಿನ ಬಟ್ಲಡ್ಕ ಜಮಾಅತ್ ನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮವು ಎಪ್ರಿಲ್ 17ರಿಂದ 20ರವರೆಗೆ ನಡೆಯಲಿದ್ದು ಇದರ ಪೋಸ್ಟರ್ ಬಿಡುಗಡೆ ಮಾ.31 ರಂದು ಈದುಲ್ ಫಿತರ್ ದಿನ ಬಟ್ಲಡ್ಕ ಜಮಾಅತ್ ಅಧ್ಯಕ್ಷರಾದ ಮುಹಮ್ಮದ್ ಬಂದಾರು ಅವರು ನೇತೃತ್ವದಲ್ಲಿ ಬಿಡುಗಡೆಗೊಳಿಸ ಮಾತನಾಡಿದ ಸ್ಥಳೀಯ ಖತೀಬ್ ಬಹು ಮುಹಮ್ಮದ್ ಆಸಿಫ್ ಸಖಾಫಿ ಯವರು ಉತ್ತಮ ರೀತಿಯಲ್ಲಿ ನಡೆಯಲು ಭಗವಂತನ ಕೃಪೆ ಇರಲಿ ಎಂದು ಹಾರೈಸಿದರು.
ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಬಟ್ಲಡ್ಕ ಕೋಶಾಧಿಕಾರಿ ಈಸುಬು ಪೇರಲ್ದಪಲಿಕೆ ಹಾಗೂ ಜಮಾಅತ್ ನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ: ಮುಹಮ್ಮದ್ ಬಂದಾರು ಬಟ್ಲಡ್ಕ