ಅಳದಂಗಡಿ: ಬಡಗಕಾರಂದೂರು ಗ್ರಾಮದ ಬಿಕ್ಕಿರ ಮನೆಯ ಜಿನ್ನಪ್ಪ ಪೂಜಾರಿ (80 ವರ್ಷ) ಅವರು ಅಸೌಖ್ಯದಿಂದ ಇಂದು ಎ.2 ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಕೃಷಿಕರಾಗಿದ್ದು ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಪತ್ನಿ ರತ್ನ, ನಾಲ್ಕು ಮಕ್ಕಳಾದ ಯಶೋಧರ ಪೂಜಾರಿ, ಲೀಲಾವತಿ, ಕೃಷ್ಣಪ್ಪ ಪೂಜಾರಿ, ತಿಮ್ಮಪ್ಪ ಪೂಜಾರಿ, ಸಹೋದರ ಓಬಯ್ಯ ಪೂಜಾರಿ, ಸಹೋದರಿ ಪದ್ಮಾವತಿ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.