23.4 C
ಪುತ್ತೂರು, ಬೆಳ್ತಂಗಡಿ
April 5, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ವಿದ್ಯಾರ್ಥಿ ಕೀರ್ತನ್ ಕೈಚಳಕದಿಂದ ಸಾಸಿವೆಯಲ್ಲಿ ಮೂಡಿದ`ಭಗತ್ ಸಿಂಗ್’ ಚಿತ್ರ :ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಸೇರ್ಪಡೆ

ಬೆಳ್ತಂಗಡಿ: ತಾಲೂಕಿನ ತಣ್ಣೀರುಪಂತ ಗ್ರಾಮದ ಅಳಕ್ಕೆ ಮಡ್ಯೋಟ್ಟು ನಿವಾಸಿ ಎಂ. ಕೀರ್ತನ್ ರವರು ರಚಿಸಿದ ಚಿತ್ರ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಗೆ ಸೇರಿದೆ. ಅವರು ಸಾಸಿವೆ ಕಾಳನ್ನು ಬಳಸಿ ಹುತಾತ್ಮ ಸ್ವಾತಂತ್ರö್ಯ ಹೋರಾಟಗಾರ ಭಗತ್ ಸಿಂಗ್‌ರವರ ಭಾವಚಿತ್ರ ರಚಿಸಿದ್ದು, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಂಪಾದಕೀಯ ಮಂಡಳಿ ಅನುಮೋದಿಸಿ ದಾಖಲೆಯಾಗಿ ದಾಖಲಿಸಿಕೊಂಡಿದೆ.


9ನಿಮಿಷದಲ್ಲಿ 10 ಸೆಂ.ಮೀ ಉದ್ದ ಚಿತ್ರ:
ತಣ್ಣೀರುಪಂತದ ರುದ್ರಗಿರಿ ಮೃತ್ಯುಂಜಯ ದೇವಸ್ಥಾನದ ಆವರಣದಲ್ಲಿ ಕೀರ್ತನ್ ಸಾಸಿವೆಯನ್ನು ಬಳಸಿ ಕೇವಲ 10 ಸೆಂ.ಮೀ. ವ್ಯಾಪ್ತಿಯೊಳಗೆ 9 ನಿಮಿಷ 12ಸೆಕೆಂಡುಗಳಲ್ಲಿ ಚಿತ್ರವನ್ನು ಪೂರ್ಣಗೊಳಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ತಮ್ಮ ಹೆಸರು ದಾಖಲಿಸಿಕೊಂಡು ಗಮನ ಸೆಳೆದಿದ್ದಾರೆ. ಇಳೆಯ ವಯಸ್ಸಿನಲ್ಲಿ ಚಿತ್ರಕಲೆಯ ಮೇಲೆ ಅಪಾರ ಆಸಕ್ತಿ ಹೊಂದಿದ್ದರು. ತಮ್ಮ ಸ್ಮೇಹಿತರು ಚಿತ್ರ ಬಿಡಿಸುವುದನ್ನು ವೀಡಿಯೋ ಚಿತ್ರಿಸಿ ಇಂಡಿಯಾ ಬುಕ್ ಆಫ್ ರೆರ್ಕಾಡ್‌ಗೆ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ ಸಂಸ್ಥೆ, ಮಾ.೬ರಂದು ಇ-ಮೇಲ್ ಮುಖಾಂತರ ತಾವು ಬಿಡಿಸಿರುವ ಚಿತ್ರ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಗೆ ಸೇರಿದೆ ಎಂದು ತಿಳಿಸಿರುವುದು ಕೀರ್ತನ್ ರವರ ಚಿತ್ರಕಲೆಯ ಮೇಲಿರುವ ಆಸಕ್ತಿಗೆ ಮತ್ತಷ್ಟು ಪುಷ್ಠಿ ನೀಡಿದೆ.
ರಾತ್ರಿ ಉದ್ಯೋಗ ಬೆಳಗ್ಗೆ ಕಾಲೇಜು: ಕೀರ್ತನ್ ಧರ್ಣಪ್ಪ ಪೂಜಾರಿ ಮತ್ತು ಜಯಂತಿ ದಂಪತಿಗಳ ಕೊನೆಯ ಪುತ್ರç. ಬಡ ಕುಟುಂಬದವರಾದ ಇವರು ಉಪ್ಪಿನಂಗಡಿಯಲ್ಲಿ ರಾತ್ರಿ ಅರೆಕಾಲಿಕ ಉದ್ಯೋಗ ಮಾಡಿ ಬೆಳ್ತಂಗಡಿ ಗುರುದೇವ ಕಾಲೇಜಿನಲ್ಲಿ ೩ನೇ ವರ್ಷದ ಪದವಿ ವಿದ್ಯಾರ್ಜನೆ ನಡೆಸುತ್ತಿದ್ದಾರೆ. ಕ್ಯಾನ್ವಾಸ್ ಚಿತ್ರಕಲೆ, ಪೆನ್ಸಿಲ್ ಆರ್ಟ್ ಸಹಿತ ಹಲವು ವಿವಿಧ ಚಿತ್ರವನ್ನು ಬಿಡುಸುತ್ತಾರೆ ಕೀರ್ತನ್. ತಣ್ಣೀರುಪಂತ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಸೆಕ್ರೇಡ್ ಹಾರ್ಟ್ ಹೈಸ್ಕೂಲ್ ಪ್ರೌಢ, ಬೆಳ್ತಂಗಡಿ ಗುರುದೇವ ಕಾಲೇಜಿನಲ್ಲಿ ಪಿಯುಸಿ ಮತ್ತು ಪ್ರಸ್ತುತ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.


ಬಡ ಕುಟುಂಬದ ವಿದ್ಯಾರ್ಥಿಯ ಸಾಧನೆ:
ಚಿತ್ರಕಲೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ಕೀರ್ತನ್, ಚಿತ್ರಕಲೆಯಲ್ಲಿ ಸಾಧನೆ ಮಾಡುವ ಗುರಿ ಹೊಂದಿದ್ದಾರೆ. ಕುಣಿತ ಭಜನೆ ಸಹಿತ ವಿವಿಧ ಕ್ಷೇತ್ರದಲ್ಲಿ ತಮ್ನನ್ನು ತೊಡಗಿಸಿಕೊಂಡಿರುವ ಅವರು ಕಡು ಬಡತನದಲ್ಲಿ ವಿದ್ಯಾರ್ಜನೆ ನಡೆಸುತ್ತಿದ್ದಾರೆ. ಅವರ ಸಾಧನೆಗೆ ಉತ್ತಮ ಪ್ರೋತ್ಸಾಹ ದೊರೆತರೆ ಚಿತ್ರಕಲೆಯಲ್ಲಿ ಇನ್ನಷ್ಟು ಮಹತ್ವರಾದ ಸಾಧನೆಗಳಿಗೆ ಅಣಿಯಾಗಬಹುದು ಎಂಬುದು ಸಾರ್ವಜನಿಕರ ಮಾತು. ಕೀರ್ತನ್ ರವರ ಸಾಧನೆಗೆ ಗ್ರಾಮದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದ್ದು ಪ್ರತಿಭೆಗೆ ಸೂಕ್ತ ವೇದಿಕೆ ಸಿಗಲಿ ಎಂದು ನಾಗರಿಕರ ಆಶಯವಾಗಿದೆ.

Related posts

ನಾಳದಲ್ಲಿ ಅಯ್ಯಪ್ಪ ಪೂಜೆ- ಇರುಮುಡಿ ಕಟ್ಟುವ ಕಾರ್ಯಕ್ರಮ

Suddi Udaya

ಪುಂಜಾಲಕಟ್ಟೆ ಕೆ ಪಿ ಎಸ್ ಪ್ರೌಢಶಾಲಾ ವಿಭಾಗ ವಿದ್ಯಾರ್ಥಿ ಪರಿಷತ್ ರಚನೆ

Suddi Udaya

ಅ. 6 -7: ಮೂಡಬಿದ್ರೆ ಆಳ್ವಾಸ್ ವಿದ್ಯಾಗಿರಿ ಕ್ಯಾಂಪಸ್ ನಲ್ಲಿ “ಆಳ್ವಾಸ್ ಪ್ರಗತಿ” ಬೃಹತ್ ಉದ್ಯೋಗ ಮೇಳ: ಉದ್ಯೋಗಾಕಾಂಕ್ಷಿ ಯುವಕ- ಯುವತಿಯರು ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬಹುದು: ಶಾಸಕ ಹರೀಶ್ ಪೂಂಜ

Suddi Udaya

ಬಂದಾರು: ಉಜ್ವಲ್ ಗ್ಯಾಸ್ ವಿತರಣೆ ಹಾಗೂ ಕೆವೈಸಿ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಕಾರ್ಯಕ್ರಮ

Suddi Udaya

ಬೆಳಾಲು ಪ್ರೌಢಶಾಲೆ ಪ್ರಾರಂಭೋತ್ಸವ ಮತ್ತು ಉಚಿತ ನೋಟ್ ಪುಸ್ತಕ ವಿತರಣೆ

Suddi Udaya

ಉಜಿರೆ :ಎಸ್ .ಡಿ.ಎಂ.ಶಿಕ್ಷಣ ಸಂಸ್ಥೆಯಿಂದ ರೂ 15.15 ಲಕ್ಷ ವಿದ್ಯಾರ್ಥಿ ವೇತನ ವಿತರಣೆ

Suddi Udaya
error: Content is protected !!