ಬೆಳ್ತಂಗಡಿ: ತಾಲೂಕಿನ ತಣ್ಣೀರುಪಂತ ಗ್ರಾಮದ ಅಳಕ್ಕೆ ಮಡ್ಯೋಟ್ಟು ನಿವಾಸಿ ಎಂ. ಕೀರ್ತನ್ ರವರು ರಚಿಸಿದ ಚಿತ್ರ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಗೆ ಸೇರಿದೆ. ಅವರು ಸಾಸಿವೆ ಕಾಳನ್ನು ಬಳಸಿ ಹುತಾತ್ಮ ಸ್ವಾತಂತ್ರö್ಯ ಹೋರಾಟಗಾರ ಭಗತ್ ಸಿಂಗ್‌ರವರ ಭಾವಚಿತ್ರ ರಚಿಸಿದ್ದು, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಂಪಾದಕೀಯ ಮಂಡಳಿ ಅನುಮೋದಿಸಿ ದಾಖಲೆಯಾಗಿ ದಾಖಲಿಸಿಕೊಂಡಿದೆ.


9ನಿಮಿಷದಲ್ಲಿ 10 ಸೆಂ.ಮೀ ಉದ್ದ ಚಿತ್ರ:
ತಣ್ಣೀರುಪಂತದ ರುದ್ರಗಿರಿ ಮೃತ್ಯುಂಜಯ ದೇವಸ್ಥಾನದ ಆವರಣದಲ್ಲಿ ಕೀರ್ತನ್ ಸಾಸಿವೆಯನ್ನು ಬಳಸಿ ಕೇವಲ 10 ಸೆಂ.ಮೀ. ವ್ಯಾಪ್ತಿಯೊಳಗೆ 9 ನಿಮಿಷ 12ಸೆಕೆಂಡುಗಳಲ್ಲಿ ಚಿತ್ರವನ್ನು ಪೂರ್ಣಗೊಳಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ತಮ್ಮ ಹೆಸರು ದಾಖಲಿಸಿಕೊಂಡು ಗಮನ ಸೆಳೆದಿದ್ದಾರೆ. ಇಳೆಯ ವಯಸ್ಸಿನಲ್ಲಿ ಚಿತ್ರಕಲೆಯ ಮೇಲೆ ಅಪಾರ ಆಸಕ್ತಿ ಹೊಂದಿದ್ದರು. ತಮ್ಮ ಸ್ಮೇಹಿತರು ಚಿತ್ರ ಬಿಡಿಸುವುದನ್ನು ವೀಡಿಯೋ ಚಿತ್ರಿಸಿ ಇಂಡಿಯಾ ಬುಕ್ ಆಫ್ ರೆರ್ಕಾಡ್‌ಗೆ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ ಸಂಸ್ಥೆ, ಮಾ.೬ರಂದು ಇ-ಮೇಲ್ ಮುಖಾಂತರ ತಾವು ಬಿಡಿಸಿರುವ ಚಿತ್ರ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಗೆ ಸೇರಿದೆ ಎಂದು ತಿಳಿಸಿರುವುದು ಕೀರ್ತನ್ ರವರ ಚಿತ್ರಕಲೆಯ ಮೇಲಿರುವ ಆಸಕ್ತಿಗೆ ಮತ್ತಷ್ಟು ಪುಷ್ಠಿ ನೀಡಿದೆ.
ರಾತ್ರಿ ಉದ್ಯೋಗ ಬೆಳಗ್ಗೆ ಕಾಲೇಜು: ಕೀರ್ತನ್ ಧರ್ಣಪ್ಪ ಪೂಜಾರಿ ಮತ್ತು ಜಯಂತಿ ದಂಪತಿಗಳ ಕೊನೆಯ ಪುತ್ರç. ಬಡ ಕುಟುಂಬದವರಾದ ಇವರು ಉಪ್ಪಿನಂಗಡಿಯಲ್ಲಿ ರಾತ್ರಿ ಅರೆಕಾಲಿಕ ಉದ್ಯೋಗ ಮಾಡಿ ಬೆಳ್ತಂಗಡಿ ಗುರುದೇವ ಕಾಲೇಜಿನಲ್ಲಿ ೩ನೇ ವರ್ಷದ ಪದವಿ ವಿದ್ಯಾರ್ಜನೆ ನಡೆಸುತ್ತಿದ್ದಾರೆ. ಕ್ಯಾನ್ವಾಸ್ ಚಿತ್ರಕಲೆ, ಪೆನ್ಸಿಲ್ ಆರ್ಟ್ ಸಹಿತ ಹಲವು ವಿವಿಧ ಚಿತ್ರವನ್ನು ಬಿಡುಸುತ್ತಾರೆ ಕೀರ್ತನ್. ತಣ್ಣೀರುಪಂತ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಸೆಕ್ರೇಡ್ ಹಾರ್ಟ್ ಹೈಸ್ಕೂಲ್ ಪ್ರೌಢ, ಬೆಳ್ತಂಗಡಿ ಗುರುದೇವ ಕಾಲೇಜಿನಲ್ಲಿ ಪಿಯುಸಿ ಮತ್ತು ಪ್ರಸ್ತುತ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಬಡ ಕುಟುಂಬದ ವಿದ್ಯಾರ್ಥಿಯ ಸಾಧನೆ:
ಚಿತ್ರಕಲೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ಕೀರ್ತನ್, ಚಿತ್ರಕಲೆಯಲ್ಲಿ ಸಾಧನೆ ಮಾಡುವ ಗುರಿ ಹೊಂದಿದ್ದಾರೆ. ಕುಣಿತ ಭಜನೆ ಸಹಿತ ವಿವಿಧ ಕ್ಷೇತ್ರದಲ್ಲಿ ತಮ್ನನ್ನು ತೊಡಗಿಸಿಕೊಂಡಿರುವ ಅವರು ಕಡು ಬಡತನದಲ್ಲಿ ವಿದ್ಯಾರ್ಜನೆ ನಡೆಸುತ್ತಿದ್ದಾರೆ. ಅವರ ಸಾಧನೆಗೆ ಉತ್ತಮ ಪ್ರೋತ್ಸಾಹ ದೊರೆತರೆ ಚಿತ್ರಕಲೆಯಲ್ಲಿ ಇನ್ನಷ್ಟು ಮಹತ್ವರಾದ ಸಾಧನೆಗಳಿಗೆ ಅಣಿಯಾಗಬಹುದು ಎಂಬುದು ಸಾರ್ವಜನಿಕರ ಮಾತು. ಕೀರ್ತನ್ ರವರ ಸಾಧನೆಗೆ ಗ್ರಾಮದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದ್ದು ಪ್ರತಿಭೆಗೆ ಸೂಕ್ತ ವೇದಿಕೆ ಸಿಗಲಿ ಎಂದು ನಾಗರಿಕರ ಆಶಯವಾಗಿದೆ.