37.7 C
ಪುತ್ತೂರು, ಬೆಳ್ತಂಗಡಿ
April 13, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಯಿಂದ ತಾಲೂಕಿನ ಸಾಧಕ ಮಹಿಳೆಯರಿಗೆ ಪಂಚರತ್ನ ಪ್ರಶಸ್ತಿ ಪುರಸ್ಕಾರ

ಬೆಳ್ತಂಗಡಿ : ಜೆಸಿಐ ಬೆಳ್ತಂಗಡಿ ವತಿಯಿಂದ ತಾಲೂಕಿನ 5 ಸಾಧಕ ಮಹಿಳೆಯರಿಗೆ ಪಂಚರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು.

ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಲಾೖಲ ಗ್ರಾಮದ ರಾಷ್ಟ್ರೀಯ ಅಥ್ಲೆಟಿಕ್ ಕು. ಚಂದ್ರಿಕ, ತಾಲೂಕಿನ ನಾಟಿ ವೈದ್ಯೆ ಶ್ರೀಮತಿ ಸುದರ್ಶನ, ಮಹಿಳಾ ಅಟೊ ಚಾಲಕಿ ಮಾದರಿ ಮಹಿಳೆ ಶ್ರೀಮತಿ ಶಾಂತಿ ಪಾಯ್ಸ್, ಸಮಾಜ ಸೇವಕಿ ಉರಗ ರಕ್ಷಕಿ ಶೋಭ ಯಾನೆ ಆಶಾ ಕುಪ್ಪೆಟ್ಟಿ, ಕಿರಿಯ ವಯಸ್ಸಿನಲ್ಲಿ ರೆಸ್ಟೋರೆಂಟ್ ಉದ್ಯಮಕ್ಕೆ ಕಾಲಿಟ್ಟ ಯುವ ಉದ್ಯಮಿ ಕು. ಶ್ರೇಯಾ ಶೆಟ್ಟಿ ಪಂಚತಾರ ಪ್ರಶಸ್ತಿಯನ್ನು ಸ್ವೀಕರಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಗಳೂರು ಅಬಕಾರಿ ಉಪ ವಿಭಾಗದ ಉಪ ವರಿಷ್ಠಾಧಿಕಾರಿ ಶ್ರೀಮತಿ ಸೌಮ್ಯಲತಾ ಎನ್ ಇವರು ಸಾಧಕಿಯರಿಗೆ ಪ್ರಶಸ್ತಿ ಪ್ರಧಾನ ಮಾಡಿ ಸಭೆಯನ್ನುದ್ದೇಶಿಸಿ ಮಹಿಳೆಯರಿಗೆ ಸಿಗುವ ಇಂದಿನ ಅವಕಾಶಗಳು ಹಾಗೂ ಸಾಧನೆಗೆ ಯಾವ ನೆಪಗಳು ಅಡ್ಡಿಯಲ್ಲ ಇಚ್ಛಾಶಕ್ತಿ ಒಂದಿದ್ದರೆ ಸಾಕು ಮಹಿಳೆ ಏನನ್ನೂ ಸಾಧಿಸಬಲ್ಲಳು ಎಂಬ ಅಭಿಪ್ರಾಯ ಪಟ್ಟರು. ಜೆಸಿಐ ಬೆಳ್ತಂಗಡಿಯ ಈ ಕಾರ್ಯಕ್ರಮವನ್ನು ಶ್ಲಾಘಿಸಿ ಶುಭಹಾರೈಸಿದರು.

ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ| ದೇವದಾಸ್ ಶೆಟ್ಟಿ, ಮಹಿಳಾ ಮಂಡಲಗಳ ಒಕ್ಕೂಟ ಅಧ್ಯಕ್ಷೆ ಶ್ರೀಮತಿ ಸವಿತಾ ಜಯದೇವ, ಬ್ಯೂಟಿ ಪಾರ್ಲರ್ ಅಸೊಶಿಯೇಶನ್ ಅಧ್ಯಕ್ಷೆ ಶ್ರೀಮತಿ ರಶ್ಮಿತಾ ಆಳ್ವಾ, ಕಾರ್ಯಕ್ರಮ ಸಂಯೋಜಕಿ ಪವಿತ್ರ ಚಿದಾನಂದ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಭಾಧ್ಯಕ್ಷತೆ ಜೆಸಿಐ ಬೆಳ್ತಂಗಡಿ ಅಧ್ಯಕ್ಷೆ ಜೇಸಿ ಆಶಾಲತಾ ಪ್ರಶಾಂತ್ ವಹಿಸಿ ಕಾರ್ಯಕ್ರಮದ ಉದ್ದೇಶದ ಮಾಹಿತಿ ನೀಡಿದರು. ಮಹಿಳಾ ಜೇಸಿ ಸಂಯೋಜಕಿ ಜೇಸಿ ಚಿತ್ರಫ್ರಭ ಸಭೆಗೆ ಧನ್ಯವಾದವಿತ್ತರು.
ಪೂರ್ವಾಧ್ಯಕ್ಷರು, ಎಲ್ಲಾ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

Related posts

ವಾಣಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿಯಲ್ಲಿ ಚಂದ್ರಯಾನ – 3 ಯಶಸ್ವಿಯ ಸಂಭ್ರಮಾಚರಣೆ

Suddi Udaya

ಬೆಳ್ತಂಗಡಿ ತಾಲೂಕಿನ ಪಂಚ ಗ್ಯಾರಂಟಿ ಸಮಾವೇಶ

Suddi Udaya

ಧರ್ಮಸ್ಥಳ: ಕಲ್ಲೇರಿಯಲ್ಲಿ ನೂತನ ‘ಓಂಕಾರ’ ಮಲ್ಟಿ ಸ್ಟೋರ್ ಶುಭಾರಂಭ

Suddi Udaya

ಕಕ್ಕಿಂಜೆ ಮನ್ನಡ್ಕಪಾದೆ ಗುಡ್ಡಕ್ಕೆ ಬೆಂಕಿ

Suddi Udaya

ಬೆಳ್ತಂಗಡಿಯಲ್ಲಿ ಮಳೆ ಅವಾಂತರ, ವೇಣೂರಿನಲ್ಲಿ ಧರೆ ಕುಸಿತ, ಹಲವು ಕಾರುಗಳಿಗೆ ಹಾನಿ

Suddi Udaya

ತೆಕ್ಕಾರು: ಕುಟ್ಟಿಗಳ ಬಜಾರ್ ಸ.ಹಿ.ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ