25.3 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳಾಲು ಕೊಡೋಳುಕೆರೆ ಕಾಡಿನಲ್ಲಿ ಹೆಣ್ಣು ಮಗು ಪತ್ತೆ ಪ್ರಕರಣ: ಮಗುವಿನ ಪೋಷಕರನ್ನು ಪತ್ತೆಹಚ್ಚಿದ ಪೊಲೀಸರು

ಬೆಳ್ತಂಗಡಿ : ಬೆಳಾಲು ಗ್ರಾಮದ ಕೊಡೋಳುಕೆರೆ -ಮುಂಡ್ರೋಟ್ಟು ಕಾಡಿನಲ್ಲಿ ಮಾ.22 ರಂದು ಬೆಳಗ್ಗೆ ಎರಡೂವರೆ ತಿಂಗಳ ಹಸುಗೂಸು ಹೆಣ್ಣು ಮಗುವನ್ನು ಅಮಾನವೀಯವಾಗಿ ಬಿಟ್ಟು ಹೋಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸರು ಮಗುವಿನ ಪೋಷಕರನ್ನು ಪತ್ತೆಹಚ್ಚಿದ್ದು, ಬೆಳಾಲು ಗ್ರಾಮದ ಮಾಯಾ ನಿವಾಸಿ ರಂಜಿತ್ ಗೌಡ ಎಂಬ
ಯುವಕ ನೋರ್ವನನ್ನು ಎ.2ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಬೆಳಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡೋಳುಕೆರೆ-ಮಯಾ ರಸ್ತೆಯ ಸಮೀಪವಿರುವ ಕಾಡಿನಲ್ಲಿ ಎರಡುವರೆ ತಿಂಗಳ ಪುಟ್ಟ ಹೆಣ್ಣು ಮಗುವೊಂದನ್ನು ಯಾರೋ ಪೋಷಕರು ಬಿಟ್ಟು ಹೋಗಿರುವುದು ಮಾ.22ರಂದು ಬೆಳಗ್ಗೆ ಪತ್ತೆಯಾಗಿತ್ತು. ಉಜಿರೆ-ಬೆಳಾಲು ಬಸ್‌ನಿಂದ ಇಳಿದ ಸ್ಥಳೀಯ ನಿವಾಸಿ ಶ್ರೀಮತಿ ಗುಲಾಬಿ ಎಂಬುವವರು ಮಾಯ ಕಡೆಗೆ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಕಾಡಿನ ಮಧ್ಯೆ ಮಗು ಕೂಗುವ ಶಬ್ದ ಕೇಳಿಸಿತು. ಸ್ಪಲ್ಪ ಹೊತ್ತು ನಿಂತು ಮಗು ಕೂಗುತ್ತಿರುವುದನ್ನು ಖಚಿತ ಪಡಿಸಿಕೊಂಡ ಗುಲಾಬಿ ಅವರು ಅಲ್ಲಿಯೇ ಸೊಪ್ಪಿಗಾಗಿ ಬಂದವರಲ್ಲಿ ವಿಷಯ ತಿಳಿಸಿ, ಮಗು ಕೂಗುತ್ತಿರುವ ಸ್ಥಳಕ್ಕೆ ಬಂದು ನೋಡಿದಾಗ, ಬಟ್ಟೆಯಲ್ಲಿ ಸುತ್ತಿ ಮಲಗಿದ ಸ್ಥಿತಿಯಲ್ಲಿದ್ದ ಮುದ್ದಾದ ಹೆಣ್ಣು ಮಗು ಪತ್ತೆಯಾಗಿತ್ತು. ಬಳಿಕ ಬೆಳಾಲು ಗ್ರಾಮ ಪಂಚಾಯತ್ ಅಧ್ಯೆಕ್ಷೆ ವಿದ್ಯಾಶ್ರೀನಿವಾಸ್ ಹಾಗೂ ಗ್ರಾಮಸ್ಥರಾದ ಪ್ರೇಮಾ ಕೊಲ್ಪಾಡಿ ಮತ್ತು ಪ್ರೇಮಾ ಮಾಯ ಸಹಿತ ಆಶಾ ಕಾರ್ಯತೆಯರು, ಆರೋಗ್ಯ ಇಲಾಖೆಯ ಸಿಹೆಚ್‌ಓ ಘಟನಾ ಸ್ಥಳಕ್ಕೆ ಆಗಮಿಸಿ ಮಗುವನ್ನು ರಕ್ಷಿಸಿ, ಧರ್ಮಸ್ಥಳ ಪೊಲೀಸರ ಸಮ್ಮುಖದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದು ಪುತ್ತೂರು ರಾಮಕೃಷ್ಣ ಅಶ್ರಮಕ್ಕೆ ಹಸ್ತಾಂತರಿಸಲಾಗಿತ್ತು. ಅಪರಿಚಿತ ಹೆಣ್ಣು ಮಗು ಪತ್ತೆಯಾದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಬೆಳ್ತಂಗಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಾದ ಅನ್ನಪೂರ್ಣ ಮಾ.22 ರಂದು ದೂರು ನೀಡಿದ್ದು ಅದರಂತೆ ಪ್ರಕರಣ ದಾಖಲಾಗಿತ್ತು.


ಬೆಳಾಲು ಕಾಡಿನಲ್ಲಿ ಪತ್ತೆಯಾದ ಮಗುವಿನ ಪೋಷಕರ ಬಗ್ಗೆ ಕಳೆದ ನಾಲ್ಕೈದು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ಬಗ್ಗೆ ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿದ ಧರ್ಮಸ್ಥಳ ಪೊಲೀಸರ ತಂಡ ಎ.2 ರಂದು ರಾತ್ರಿ ಬೆಳಾಲು ಗ್ರಾಮದ ನಿವಾಸಿ ರಂಜಿತ್ ಗೌಡ ಎಂಬ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ರಂಜಿತ್ ಗೌಡ ಧಮ೯ಸ್ಥಳದ ನಿವಾಸಿ ಯುವತಿಯನ್ನು ಪ್ರೀತಿಸಿದ್ದು, ಮದುವೆಯಾಗುವ ಭರವಸೆಯೊಂದಿಗೆ ಮಗು ಜನಿಸಿದ್ದು
ನಂತರ ಅವರೊಳಗೆ ಮನಸ್ತಾಪ ಉಂಟಾಗಿ, ಯುವತಿ ಮಗುವನ್ನು ಯವಕನ ಮನೆಗೆ ತಂದು ಬಿಟ್ಟು ಹೋಗಿದ್ದಾಳೆ ಎನ್ನಲಾಗುತ್ತಿದೆ. ಇದರಿಂದ ಕಂಗೆಟ್ಟಿರುವ ಯುವಕ ಮಗುನ್ನು ಕಾಡಿಗೆ ತಂದು ಬಿಟ್ಟ ಎಂದು ತನಿಖೆಯಿಂದ ಗೊತ್ತಾಗಿದೆ. ಪ್ರಕರಣದ ಸತ್ಯಾತ್ಯತೆ ಪೊಲೀಸರ ವಿಚಾರಣೆ, ಡಿ.ಎನ್.ಎ ಟೆಸ್ಟ್ ಬಳಿಕವಷ್ಟೇ ಬೆಳಕಿಗೆ ಬರಬೇಕಾಗಿದೆ.

Related posts

ಶಿಶಿಲ: ದಿ. ಧರ್ಣಪ್ಪ ಗೌಡ ರವರ ಸ್ಮರಣಾರ್ಥ ಕೊರಗಪ್ಪ ಗೌಡರಿಂದ ನಂದಗೋಕುಲ ಗೋಶಾಲೆಗೆ ದೇಣಿಗೆ

Suddi Udaya

ಬಂದಾರು ಗ್ರಾಮ ಪಂಚಾಯತ್ ನ ಗ್ರಾಮ ಸಭೆ

Suddi Udaya

ಕಳೆಂಜದಲ್ಲಿ ಲೋಲಾಕ್ಷರ ಮನೆ ಪಂಚಾಂಗ ಕಿತ್ತೆಸೆದ ಅರಣ್ಯ ಇಲಾಖೆ:ಬಡವನ ಮೇಲೆ ಅರಣ್ಯಧಿಕಾರಿಗಳ ದೌರ್ಜನ್ಯದ ವಿರುದ್ಧ ತಿರುಗಿ ಬಿದ್ದ ಶಾಸಕರು

Suddi Udaya

ಕಕ್ಕಿಂಜೆ: ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

Suddi Udaya

ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ

Suddi Udaya

ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಸುಲ್ಕೇರಿಗೆ ಭೇಟಿ

Suddi Udaya
error: Content is protected !!