24.5 C
ಪುತ್ತೂರು, ಬೆಳ್ತಂಗಡಿ
April 5, 2025
Uncategorized

ಬೆಳ್ತಂಗಡಿ : ಮೂರುಗೋಳಿಯ ಪ್ರವೀಣ್.ಎಂ‌‌ ಅವರಿಗೆ ಮುಖ್ಯಮಂತ್ರಿ ಪದಕ ಪ್ರದಾನ:

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಂಭೀರ ಪ್ರಕರಣ ನಡೆದರೂ ವಿಶೇಷ ಪೊಲೀಸ್ ತಂಡದ ಜೊತೆಗೆ ಇದ್ದು ಹಿರಿಯ ಅಧಿಕಾರಿಗಳು ಹೇಳಿದಂತೆ ಕರ್ತವ್ಯ ನಿರ್ವಹಿಸಿ ಭೇದಿಸುವ ಪೊಲೀಸ್ ಹೆಡ್ ಕಾನ್ಟೇಬಲ್ ಮೂರುಗೋಳಿಯ ಪ್ರವೀಣ್.ಎಂ ಇವರಿಗೆ ಈ ಭಾರಿ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದು, ಎಪ್ರಿಲ್ 2 ರಂದು ಕರ್ನಾಟಕ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪದಕ ಪ್ರದಾನ ಮಾಡಿದರು.

ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಮೂರುಗೋಳಿ ನಿವಾಸಿ ಅಣ್ಣು ದೇವಾಡಿಗ ಮತ್ತು ಬೇಬಿ ದೇವಾಡಿಗರ ಪ್ರಥಮ ಪುತ್ರ ಪ್ರವೀಣ್.ಎಂ ಅವರು 2002 ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡರು.

ಮೊದಲ ಕರ್ತವ್ಯವನ್ನು ಮಂಗಳೂರು ಬಂದರು ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ್ದು, ಬಳಿಕ ಬೆಳ್ತಂಗಡಿ ವೃತ್ತ ಕಚೇರಿ, ದಕ್ಷಿಣ ಕನ್ನಡ ಜಿಲ್ಲಾ ಅಪರಾಧ ಪತ್ತೆ ದಳ(DCIB) , ಬಂಟ್ವಾಳ ಡಿವೈಎಸ್ಪಿ ವಿಶೇಷ ಅಪರಾಧ ದಳ , ವೇಣೂರು ಪೊಲೀಸ್ ಠಾಣೆ, ಸದ್ಯ ಈಗ ದಕ್ಷಿಣ ಕನ್ನಡ ಸೈಬರ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

NIA ಅಧಿಕಾರಿಗಳ ಜೊತೆ ಕರ್ತವ್ಯ:

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಸಂದರ್ಭದಲ್ಲಿ NIA ತನಿಖಾ ದಳದೊಂದಿಗೆ 6 ತಿಂಗಳು ಕರ್ತವ್ಯ ನಿರ್ವಹಿಸುತ್ತಿದ್ದು. ಬಳಿಕ ಬಿಹಾರದಲ್ಲಿ ಮೋದಿ ಹತ್ಯೆ ಯತ್ನ ಪ್ರಕರಣದಲ್ಲಿ NIA ಜೊತೆ 3 ತಿಂಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ನಡುವೆ ಎರಡು ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ(NIA) ಜೊತೆಗೆ ಕರ್ತವ್ಯ ನಿರ್ವಹಿಸಿದ್ದಾರೆ.

ಹಲವು ಗಂಭೀರ ಪ್ರಕರಣದಲ್ಲಿ ದಕ್ಷತೆಯಿಂದ ಸೇವೆ
ಶರತ್ ಮಾಡಿವಾಳ ಹತ್ಯೆ ಪ್ರಕರಣ, ಫರಂಗಿಪೇಟೆ ಡಬಲ್ ಮರ್ಡರ್, ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ, 9 ದೇವಾಲಯ ಕಳವು ಪ್ರಕರಣ, ಬೆಳ್ತಂಗಡಿ ಬಂಗಾಡಿ ಬಸದಿ ಸೇರಿ 9 ದೇವಾಲಯ ಕಳ್ಳತನ ಪ್ರಕರಣ, ವಿಟ್ಲ ಕರ್ನಾಟಕ ಬ್ಯಾಂಕ್ ದರೋಡೆ, ಪುತ್ತೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ನಡೆದ ದರೋಡೆ, ವಗ್ಗ ಮನೆ ದರೋಡೆ ಪ್ರಕರಣ, ವಿಟ್ಲ ಸಿಂಗಾರಿ ಬೀಡಿ ನಕಲಿ ಇಡಿ ಅಧಿಕಾರಿಗಳ ಸೋಗಿನಲ್ಲಿ ದರೋಡೆ, ಫರಂಗಿಪೇಟೆ ದಿಗಂತ್ ನಾಪತ್ತೆ ಪ್ರಕರಣ ಹಾಗೂ ಇನ್ನಿತರ ಗಂಭೀರ ಪ್ರಕರಣದಲ್ಲಿ ವಿಶೇಷ ತಂಡದ ಜೊತೆ ಪ್ರಮುಖ ಪಾತ್ರವನ್ನು ವಹಿಸಿ ಪ್ರಕರಣ ಭೇದಿಸಿ ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ನಗದು ಪುರಸ್ಕಾರ& ಪ್ರಶಸ್ತಿ: ಪ್ರವೀಣ್ ಅಪರಾಧ ಪತ್ತೆ ಪ್ರಕರಣದ ಕರ್ತವ್ಯಕ್ಕೆ ನಗದು ಪುರಸ್ಕಾರ ಬಹುಮಾನ ಹಾಗೂ ಇತರ ಪ್ರಶಸ್ತಿ ಲಭಿಸಿದೆ.

Related posts

ಉಜಿರೆಯ ಪದ್ಮಶ್ರೀ ಎಂಟರ್ ಪ್ರೈಸಸ್ ನಲ್ಲಿ ಪದ್ಮಶ್ರೀ ಬೆಳಕಿನ ಶಾಪಿಂಗ್ ಉತ್ಸವ ಇನ್ನೂ ಕೇವಲ 8 ದಿನ ಮಾತ್ರ

Suddi Udaya

ರುಕ್ಮಯ್ಯ ಗೌಡ ಬದ್ಯಾರು ವಿಧಿವಶ

Suddi Udaya

ಕೇಂದ್ರ ಸರ್ಕಾರದ ಪಿಎಂ ಜನ್ ಮನ್ ಕಾರ್ಯಕ್ರಮದಡಿ ನಿರ್ಮಾಣಗೊಳ್ಳಲಿರುವ ವಸತಿ ಶಾಲೆಯ ಆವರಣ: ಶಾಸಕ ಹರೀಶ್ ಪೂಂಜರಿಂದ ಸ್ಥಳ ಪರಿಶೀಲನೆ

Suddi Udaya

ಹಿಂದೂ ದೇವಾಲಯಗಳನ್ನು ಸರಕಾರದ ಹಿಡಿತದಿಂದ ಮುಕ್ತಗೊಳಿಸಲು ಒಂದು ದಿನದ ಉಪವಾಸ ಸತ್ಯಾಗ್ರಹ

Suddi Udaya

ಇಳಂತಿಲ ಶಾಲೆಗೆ ನುಗ್ಗಿದ ಕಳ್ಳರು: ಕಪಾಟಿನಲ್ಲಿ ಇಟ್ಟಿದ್ದ ನಗದು ಕಳವು

Suddi Udaya

ಪುತ್ತೂರು ಅಕ್ಷಯ ಕಾಲೇಜಿನ ಅಟರ್ನಸ್- 2024 ಫೆಸ್ಟ್ ನಲ್ಲಿ ವಾಣಿ ಪದವಿಪೂರ್ವ ಕಾಲೇಜಿಗೆ ಸಮಗ್ರ ಪ್ರಶಸ್ತಿ

Suddi Udaya
error: Content is protected !!