25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವಿದ್ಯುತ್ ತಂತಿ ಮೇಲೆ ಬಿದ್ದ ಮರದ ಗೆಲ್ಲು: ಶಾಕ್ ತಗಲಿ ಕಾರ್ಮಿಕ ಚನನ ಗೌಡ ಮೃತ್ಯು

ಬೆಳ್ತಂಗಡಿ: ಇಲ್ಲಿಯ ಹುಣ್ಸೆಕಟ್ಟೆ ಸಮೀಪದ ಪುಂಡಿಕ್ಕು ಎಂಬಲ್ಲಿ ಮರದ ಗೆಲ್ಲು ಕಡಿಯುತ್ತಿರುವಾಗ ಆಕಸ್ಮಿಕವಾಗಿ ವಿದ್ಯುತ್ ತಂತಿ ಮೇಲೆ ಬಿದ್ದು ವಿದ್ಯುತ್ ಶಾಕ್ ತಗಲಿ ಗೆಲ್ಲು ಕಡಿಯುತ್ತಿದ್ದ ಕಾರ್ಮಿಕ ಮೃತಪಟ್ಟ ದಾರುಣ ಘಟನೆ ಇಂದು ಬೆಳಿಗ್ಗೆ ಪುಂಡಿಕ್ಕು ಎಂಬಲ್ಲಿ ನಡೆದಿದೆ.


ಬೆಳ್ತಂಗಡಿ ತಾಲೂಕಿನ ಕಸಬಾ ಗ್ರಾಮದ ಪುಂಡಿಕ್ಕು ಎಂಬಲ್ಲಿ ಚನನ ಗೌಡ (೬೯ವ) ಎಂಬವರು ಇಂದು ಬೆಳಿಗ್ಗೆ ಮೆಸ್ಕಾಂ ಇಲಾಖೆಯ ಅನುಮತಿ ಪಡೆಯದೇ, ಖಾಸಗಿ ಜಮೀನಿನಲ್ಲಿ ಇರುವ ಮರದ ಗೆಲ್ಲು ಕಡಿಯುವಾಗ, ಗೆಲ್ಲು ಆಕಸ್ಮಿಕವಾಗಿ, ಅಲ್ಲಿಯೇ ರಸ್ತೆಯಲ್ಲಿ ಹಾದು ಹೋಗಿರುವ ೧೧ಕೆವಿ ಕುವೆಟ್ಟು ಫೀಡರ್‌ನ ಹೆಚ್.ಟಿ ಲೈನ್‌ಗೆ ಬಿದ್ದು ಈ ಘಟನೆ ನಡೆದಿದೆ. ಗೆಲ್ಲು ತಂತಿ ಮೇಲೆ ಬಿದ್ದುದರಿಂದ ವಿದ್ಯುತ್ ಶಾಕ್ ತಗಲಿ, ಮರದಿಂದ ಕೆಳಗೆ ಬಿದ್ದಿದ್ದು, ಕೂಡಲೇ ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಯಿತು. ಅಲ್ಲಿಯ ವೈದ್ಯರು ತಪಾಸಣೆ ನಡೆಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದು ಕೊಂಡು ಹೋಗಲು ತಿಳಿಸಿದ್ದು, ಅದರಂತೆ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಅವರು ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.


ಈ ಬಗ್ಗೆ ಬೆಳ್ತಂಗಡಿ ಶಾಖಾಧಿಕಾರಿಯವರು ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ. ಮಾಹಿತಿಯನ್ನು ಇಲೆಕ್ಟ್ರಿಕಲ್ ಇನ್‌ಸ್ಪೆಕ್ಟರೇಟ್‌ಗೂ ನೀಡಲಾಗಿದೆ.

Related posts

ಬೆಳ್ತಂಗಡಿ ವಾಣಿ ಪ.ಪೂ. ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಘಟಕದ ದೈನಂದಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಮತ್ತು ಮಹಿಳಾ ಮಂಡಳಿಯಿಂದ ಮಹಿಳಾ ದಿನಾಚರಣೆ

Suddi Udaya

ಮಾಲಾಡಿ ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ಮೂಡುಬಿದಿರೆ ಸ್ವಸ್ತೀಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿಯವರಿಂದ ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ರವರಿಗೆ ಅಭಿನಂದನೆ

Suddi Udaya

ಫೆ. 18 -22 : ಭ | 1008 ಶ್ರೀಪಾರ್ಶ್ವನಾಥ ಸ್ವಾಮಿಯ ಜಿನ ಮಂದಿರದ ಪಂಚಕಲ್ಯಾಣ ಮಹೋತ್ಸವ ಹಾಗೂ ಧಾಮ ಸಂಪ್ರೂಕ್ಷಣಾ ಪೂರ್ವಕ ಬಿಂಬ ಪ್ರತಿಷ್ಠಾ ಮಹೋತ್ಸವ

Suddi Udaya

ಸಾಮಾಜಿಕ ಜಾಲತಾಣದಲ್ಲಿ ಎಸ್‌ಡಿಪಿಐ ವಿರುದ್ಧ ಅವಹೇಳನಕಾರಿ ಪೋಸ್ಟ್: ಬೆಳ್ತಂಗಡಿ ಕ್ಷೇತ್ರ ಸಮಿತಿ ವತಿಯಿಂದ ಧರ್ಮಸ್ಥಳ ಠಾಣೆಗೆ ದೂರು

Suddi Udaya
error: Content is protected !!