26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂ.ಮಾ. ಶಾಲೆಯಲ್ಲಿ ಮಕ್ಕಳ ಬೇಸಿಗೆ ಶಿಬಿರ ಸಮ್ಮರ್ ಪ್ಯಾರಡೈಸ್ ಸಮಾರೋಪ ಸಮಾರಂಭ

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಕಳೆದ ಮೂರು ದಿನಗಳಿಂದ ಬೇಸಿಗೆ ಶಿಬಿರ ನಡೆಯುತ್ತಿದ್ದು ಎ.4ರಂದು ಶಿಬಿರಕ್ಕೆ ತೆರೆ ಎಳೆಯಲಾಯಿತು.

ಈ ಶಿಬಿರದಲ್ಲಿ ಮಕ್ಕಳೇ ತಯಾರಿಸಿರುವ ವಿವಿಧ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ವನ್ನು ಏರ್ಪಡಿಸಲಾಗಿತ್ತು. ಈ ವ್ಯಾಪಾರ ಮಳಿಗೆಯ ಉದ್ಘಾಟನಾ ಸಮಾರಂಭವನ್ನು ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ(ಕೇಂದ್ರ ಪಠ್ಯಕ್ರಮ) ಪ್ರಾಂಶುಪಾಲರು ಮನಮೋಹನ್ ನಾಯಕ್ ಹಾಗೂ ಮುರಳಿಧರ್ ದಾಸ್ ಆಗಮಿಸಿ ದೀಪ ಪ್ರಜ್ವಲಿಸಿ ಜೊತೆಗೆ ಪ್ರತಿ ಮಳಿಗೆಯ ದರ ಪಟ್ಟಿಯನ್ನು ಬಿಡುಗಡೆಗೊಳಿಸಿ ವ್ಯಾಪಾರ ಮಳಿಗೆಗೆ ಚಾಲನೆ ನೀಡಿದರು.

ನಂತರ ಮಾತಾಡಿದ ಅವರು ಬೇಸಿಗೆ ಶಿಬಿರದಿಂದ ವಿದ್ಯಾರ್ಥಿಗಳಿಗೆ ಆಗುವ ಪ್ರಯೋಜನ ಹಾಗೂ ಅವರ ವ್ಯಕ್ತಿತ್ವ ವಿಕಸನದ ಮೇಲೆ ಅದು ಬೀರುವ ಪರಿಣಾಮವನ್ನು ವ್ಯಾಪಾರದ ಅನುಭವವನ್ನು ವಿದ್ಯಾರ್ಥಿಗಳಿಗೆ ತಿಳಿಯಲು ಉತ್ತಮ ಅವಕಾಶ ಎಂದು ಶ್ಲಾಘಿಸಿದರು. ವಿದ್ಯಾರ್ಥಿಗಳ ಆಸಕ್ತಿ ಭರಿತ ವ್ಯಾಪಾರಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಸ್ವಾಗತಿಸಿ ಧನ್ಯವಾದವಿತ್ತರು. ಕಾರ್ಯಕ್ರಮದಲ್ಲಿ ಸಿದ್ದ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ (ಕೇಂದ್ರ ಪಠ್ಯಕ್ರಮ) ಇದರ ಚಿತ್ರಕಲಾ ಶಿಕ್ಷಕರಾಗಿರುವ ರವಿಚಂದ್ರ, ಶಾಲಾ‌ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಪ್ರತ್ಯಕ್ಷದರ್ಶಿಗಳಾಗಿದ್ದರು.

Related posts

ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

Suddi Udaya

ಮುಂಡಾಜೆ: ಹುರ್ತಾಜೆ ನಿವಾಸಿ ಸೀತಾ ಶೆಟ್ಟಿ ನಿಧನ

Suddi Udaya

ಬ್ರೂನೇ ದೇಶಕ್ಕೆ ಭಾರತದ ಪ್ರಧಾನಿ‌ ನರೇಂದ್ರ ಮೋದಿಜೀಯವರ ಆಗಮನ: ಬ್ರೂನೇ ದೇಶದಲ್ಲಿ ನೆಲೆಸಿರುವ ಬಳಂಜ ಶಶಿಧರ ಹೆಗ್ಡೆ ಮತ್ತು ಪ್ರಜ್ಞಾ ದಂಪತಿ ಮಕ್ಕಳಾದ ರಿಯಾನ್ಷ್ ಹೆಗ್ಡೆ ಮತ್ತು ತನಿಷ್ಕ್ ಹೆಗ್ಡೆಯವರ ಜೊತೆ ಒಂದು ಸ್ಮರಣೀಯ ಕ್ಷಣ

Suddi Udaya

ಶಿರ್ಲಾಲು: ಕೃಷಿಕ ನಾರಾಯಣ ಗೌಡ ನಿಧನ

Suddi Udaya

ನಡ: ಶಾರ್ಟ್ ಸರ್ಕ್ಯೂಟ್‌ನಿಂದ ಆಟೋ ರಿಕ್ಷಾ ಸಂಪೂರ್ಣ ಭಸ್ಮ

Suddi Udaya

ಮೇಲಂತಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya
error: Content is protected !!