26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ರತ್ನಮಾನಸ ವಿದ್ಯಾರ್ಥಿನಿಲಯದಲ್ಲಿ ಬೇಸಿಗೆ ಶಿಬಿರ ಕಲಾಬ್ದಿ-2025 ಉದ್ಘಾಟನೆ

ಉಜಿರೆ: ರತ್ನಮಾನಸದಲ್ಲಿ ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣ ದೊರೆಯುತ್ತಿದ್ದು, ಇದು ರಾಷ್ಟ್ರಕ್ಕೆ ಮಾದರಿಯಾದ ವಿದ್ಯಾರ್ಥಿ ನಿಲಯವಾಗಿದೆ. ಶಿಕ್ಷಣ ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗಬಾರದು. ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವ ರೂಪಿಸುವುದರೊಂದಿಗೆ ಭೌತಿಕ, ದೈಹಿಕ ಹಾಗೂ ಭಾವನಾತ್ಮಕವಾಗಿ ಪ್ರತಿಭೆಗಳು ಬೆಳಕಿಗೆ ಬರಲು ಸೂಕ್ತ ವೇದಿಕೆಯಾಗಿದೆ. ಬೇಸಿಗೆ ಶಿಬಿರಗಳು ಇದಕ್ಕೆ ಪೂರಕವಾಗಿವಾಗಿದೆ ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ ನುಡಿದರು.

ಅವರು ಎ.4ರಂದು ರತ್ನಮಾನಸ ಜೀವನ ಶಿಕ್ಷಣ ವಿದ್ಯಾರ್ಥಿ ನಿಲಯ ಉಜಿರೆಯಲ್ಲಿ ಎ.4ರಿಂದ ಎ.11ರವರೆಗೆ ನಡೆಯಲಿರುವ ಬೇಸಿಗೆ ಶಿಬಿರ ಕಲಾಬ್ದಿ-೨೦೨೫ನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದರು.
1973-74ರಲ್ಲಿ ರತ್ನಮಾನಸ ವಿದ್ಯಾರ್ಥಿ ನಿಲಯವನ್ನು ಆಗಿನ ಧರ್ಮಾಧಿಕಾರಿಗಳಾಗಿದ್ದ ರತ್ನವರ್ಮ ಹೆಗ್ಗಡೆ ಹಾಗೂ ಶ್ರೀಮತಿ ರತ್ನಮ್ಮ ಅವರು ಆರಂಭಿಸಿದರು. ಮಕ್ಕಳಿಗೆ ಜೀವನ ಶಿಕ್ಷಣ ನೀಡುವ ರಾಷ್ಟ್ರದ ಮೊಟ್ಟ ಮೊದಲ ವಿದ್ಯಾರ್ಥಿನಿಲಯ ಇದಾಗಿತ್ತು. ನಂತರದ ದಿನಗಳಲ್ಲಿ ಆನೇಕ ಕಡೆಗಳಲ್ಲಿ ಇದೇ ಮಾದರಿಯಲ್ಲಿ ವಿದ್ಯಾರ್ಥಿನಿಲಯಗಳು ಆರಂಭಗೊಂಡವು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಿ, ಸಾಂಪ್ರಾದಾಯಿಕ ಶಿಕ್ಷಣದ ಜೊತೆ ಜೀವನ ಶಿಕ್ಷಣವನ್ನು ಇಲ್ಲಿ ಕಲಿಸಲಾಗುತ್ತದೆ. ಇಲ್ಲಿ ಕಲಿತ ಆನೇಕ ವಿದ್ಯಾರ್ಥಿಗಳು ಸಮಾಜದಲ್ಲಿ ದೊಡ್ಡ, ದೊಡ್ಡ ಸಾಧನೆ ಮಾಡಿ ಇಂದು ಗೌರವಯುತ ಜೀವನ ನಡೆಸುತ್ತಿದ್ದಾರೆ. ರತ್ನಮಾನಸ ವಿದ್ಯಾರ್ಥಿ ನಿಲಯ ಸಮಾಜಕ್ಕೆ ಶ್ರೇಷ್ಠ ವ್ಯಕ್ತಿಗಳನ್ನು ಕೊಡುಗೆಯಾಗಿ ನೀಡಿದೆ. ಬೇಸಿಗೆ ಶಿಬಿರಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು. ಇಂತಹ ಶಿಬಿರಗಳು ತಮ್ಮ ಸುಪ್ತ ಪ್ರತಿಭಾ ವಿಕಸನ ಹಾಗೂ ವ್ಯಕ್ತಿತ್ವ ನಿರ್ಮಾಣಕ್ಕೆ ಅವಕಾಶಗಳಾಗಿ ಸಮಾಜದಲ್ಲಿ ವಿಶೇಷ ಸಾಧನೆಗಳನ್ನು ಮಾಡಲು ಪ್ರೇರಣೆ ನೀಡುತ್ತದೆ ಎಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಜಯವಾಣಿ ಪತ್ರಿಕೆಯ ವರದಿಗಾರರಾದ ಮನೋಹರ್ ಬಳಂಜ ಅವರು ಮಾತನಾಡಿ, ಬೇಸಿಗೆ ಶಿಬಿರ ವಿದ್ಯಾರ್ಥಿ ಜೀವನದಲ್ಲಿ ಅತ್ಯುತ್ತಮ ಅವಕಾಶವಾಗಿದ್ದು, ಶಿಬಿರದಲ್ಲಿ ಕಲೆಯನ್ನು ಕಲಿಯುವ ಅವಕಾಶ ದೊರೆಯುತ್ತದೆ. ಕಲಾಸಕ್ತಿ ವಿದ್ಯಾ ಪ್ರಗತಿಗೂ ಪ್ರೇರಣೆ ನೀಡುತ್ತದೆ. ವಿದ್ಯಾರ್ಥಿಗಳು ಶಿಬಿರಗಳಲ್ಲಿ ಮುಕ್ತವಾಗಿ ಭಾಗವಹಿಸಿ, ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವುದರೊಂದಿಗೆ ಸಮಾಜಕ್ಕೆ ಆಸ್ತಿಯಾಗಿ ಬೆಳೆಯಬೇಕು ಎಂದು ತಿಳಿಸಿದರು.


ಅಧ್ಯಕ್ಷತೆ ವಹಿಸಿದ್ದ ರತ್ನಮಾನಸ ವಿದ್ಯಾರ್ಥಿ ನಿಲಯದ ಪಾಲಕ ಯತೀಶ್ ಬಳಂಜ ಅವರು ಮಾತನಾಡಿ, ವಿದ್ಯಾರ್ಥಿಗಳು ಪಠ್ಯೇತರ ಚುಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು. ಕಲಾಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪ್ರತಿಭಾ ವಿಕಸನಕ್ಕೆ ಪೂರಕವಾಗಿ ರತ್ನಮಾನಸದಲ್ಲಿ ಈ ಶಿಬಿರ ಹಮ್ಮಿಕೊಂಡಿದ್ದೇವೆ. ಇಲ್ಲಿ ಕಲಿತ ಜೀವನ ಶಿಕ್ಷಣ ರಾಜ್ಯದಾದ್ಯಂತ ಪಸರಿಸಲಿ ಎಂದು ಹಾರೈಸಿದರು. ಬೇಸಿಗೆ ಶಿಬಿರದ ಸಂಯೋಜಕ ವಿನ್ಯಾಸ್ ಭಂಡಾರಿ ನಾವೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ವಿದ್ಯಾರ್ಥಿ ನಿತಿನ್ ಇವರ ಪ್ರಾರ್ಥನೆ ಬಳಿಕ ನಿಲಯದ ಸಹಪಾಲಕ ರವಿಚಂದ್ರ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ನಿತೇಶ್ ಕಾರ್ಯಕ್ರಮ ನಿರೂಪಿಸಿ, ಸಮ್ಯಕ್ ವಂದಿಸಿದರು.

Related posts

ಕೂಡಬೆಟ್ಟು ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆಯ ಸಡಗರ

Suddi Udaya

ಗೇರುಕಟ್ಟೆ : ಪರಪ್ಪು ಮಸೀದಿಯಲ್ಲಿ ತಾಜುಲ್ ಉಲಮಾ ಉಳ್ಳಾಲ ತಂಙಳ್ ಉರೂಸ್ ಪೋಸ್ಟರ್ ಬಿಡುಗಡೆ

Suddi Udaya

ಜ.10: ಜನಸ್ಪಂದನ ಸಭೆಯ ಫಲಶ್ರುತಿ:ತಾಲೂಕು ಆಡಳಿತ ಸೌಧದಲ್ಲಿ ಅರ್ಹ ಫಲಾನುಭವಿಗಳಿಗೆ 94ಸಿ, 94ಸಿಸಿ ಹಕ್ಕುಪತ್ರಗಳನ್ನು ವಿತರಣೆ

Suddi Udaya

ದ.ಕ ಜಿಲ್ಲಾ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ಸದಸ್ಯರಾಗಿ ಕೆ.ಎಮ್ ಅಬ್ದುಲ್‌ ಕರೀಮ್ ಹಾಗೂ ಜಯರಾಮ್ ಅಲಂಗಾರು ಆಯ್ಕೆ

Suddi Udaya

ಭವಿಷ್ಯದ ಚಿತ್ರರಂಗದ ಭರವಸೆಯ ಕಲಾವಿದ ರಾಜ್ ಚರಣ್ ಬ್ರಹ್ಮಾವರ್

Suddi Udaya

ವೇಣೂರು: ಅಕ್ರಮವಾಗಿ ಸಾಗಿಸುತ್ತಿದ್ದ 125 ಕೆ‌ಜಿ ರಕ್ತ ಚಂದನ: ವಾಹನ ಸಮೇತ ರಕ್ತ ಚಂದನ ವಶಕ್ಕೆ ಪಡೆದ ವೇಣೂರು ಅರಣ್ಯಧಿಕಾರಿಗಳು

Suddi Udaya
error: Content is protected !!