
ಬೆಳ್ತಂಗಡಿ:ಅತಿ ದೊಡ್ಡ ಪುಷ್ಪ ರಂಗೋಲಿ ಬಿಡಿಸಿದ ವಿದ್ಯಾರ್ಥಿನಿ
ಶ್ರದ್ಧಾ ಶೆಟ್ಟಿಯ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ಎಣಿಂಜೆ ನಿವಾಸಿ ಶೇಖರ್ ಶೆಟ್ಟಿ ಅವರ ಪುತ್ರಿ ಶ್ರದ್ಧಾ ಶೆಟ್ಟಿ ಅವರು 8 ಅಡಿ (246 ಸೆಮೀ) ವ್ಯಾಸದ ಅಳತೆಯ ವೃತ್ತಾಕಾರದ ಹೂಗಳ ರಂಗವಲ್ಲಿಯನ್ನು 1 ಗಂಟೆ 39 ನಿಮಿಷಗಳಲ್ಲಿ ಗುಲಾಬಿ, ಮಲ್ಲಿಗೆ ಮೊದಲಾದ ವಿವಿಧ ಜಾತಿಗಳ, ಕೆಂಪು,ಬಿಳಿ,ಕೇಸರಿ,ಹಳದಿ ಮೊದಲಾದ ಬಣ್ಣಗಳ ಹೂಗಳ ದಳಗಳಲ್ಲಿ ರಚಿಸಿ ದಾಖಲೆ ಮಾಡಿದ್ದಾರೆ.
ಈಕೆ ಉಜಿರೆ ಎಸ್ ಡಿ ಎಂ ಕಾಲೇಜಿನ ತೃತೀಯ ಬಿಎಸ್ ಸಿ ವಿದ್ಯಾರ್ಥಿನಿ.