ಉಜಿರೆ : ಎಸ್ ಡಿ ಯಂ ಆಂಗ್ಲ ಮಾಧ್ಯಮ ಶಾಲೆ ಉಜಿರೆ (ಸಿ ಬಿ ಯಸ್ ಇ ) ಪಠ್ಯೇತರ ಚಟುವಟಿಕೆಯಲ್ಲಿ ನಡೆಯುವ ಕರಾಟೆ ತರಬೇತಿ ವಿದ್ಯಾರ್ಥಿಗಳಿಗೆ ಬೆಲ್ಟ್ ಪ್ರಮೋಷನ್ ಪರೀಕ್ಷೆಯು ಶಾಲಾ ಆವರಣದಲ್ಲಿ ನಡೆಸಲಾಯಿತು.

ತೇರ್ಗಡೆ ಆದ ವಿದ್ಯಾರ್ಥಿಗಳಿಗೆ ಕಲರ್ ಬೆಲ್ಟ್ ಮತ್ತು ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪಠ್ಯೇತರ ಸಂಯೋಜಕರಾದ ಶ್ರೀಮತಿ ಮಾಲಿನಿ ಜೈನ್ ವಹಿಸಿಕೊಂಡು ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಯಿಂದ ಮಾನಸಿಕ ಹಾಗೂ ಬೌಧಿಕ ಬೆಳವಣಿಗೆ ಉತ್ತಮಗೊಳ್ಳುವುದು ಹಾಗೂ ಸ್ಪರ್ಧೆಗಳಿಗೆ ತಯಾರಾಗುವ ಬಗ್ಗೆ ಅರಿವು ಮೂಡಿಸಿ ಸೀನಿಯರ್ ಬೆಲ್ಟ್ ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಕರಾಟೆ ಮುಖ್ಯ ತರಬೇತಿಗಾರ ಹಾಗೂ ಪರೀಕ್ಷೆಕರು ಮತ್ತು ಅಂತಾರಾಷ್ಟ್ರೀಯ ತೀರ್ಪುಗಾರರಾದ ಸೆನ್ಸಾಯಿ ವಸಂತ ಕೆ ಬಂಗೇರ ಕರಾಟೆಯಿಂದ ವ್ಯಕ್ತಿಯ ಬದಲಾವಣೆ ಆರೋಗ್ಯ ರಕ್ಷಣೆ ದೇಹ ರಕ್ಷಣೆ ಲಾಭಗಳನ್ನು ಸವಿವಾರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾರೀರಿಕ ಶಿಕ್ಷಕಿ ಶ್ರೀಮತಿ ರಾಜಮ್ಮ ಸ್ವಾಗತಿಸಿ ಧನ್ಯವಾದಗಳು ನೀಡಿದರು.