ಕನ್ಯಾಡಿ: ಯುವವಾಹಿನಿ ಬೆಳ್ತಂಗಡಿ ಘಟಕದ ವತಿಯಿಂದ ಶ್ರೀರಾಮ ಕ್ಷೇತ್ರ ಕನ್ಯಾಡಿಯಲ್ಲಿ ನಡೆಯುತ್ತಿರುವ ರಾಮನಾಮ ತಾರಕ ಮಂತ್ರ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಎ.02 ರಂದು ಶ್ರೀರಾಮನಾಮ ತಾರಕ ಮಂತ್ರ ಭಜನಾ ಕಾರ್ಯಕ್ರಮ ನಡೆಯಿತು. ಘಟಕದ ವತಿಯಿಂದ ಹೆಚ್ಚಿನ ಸದಸ್ಯರು ಭಾಗವಹಿಸಿದ್ದರು. ಭಜನಾ ಕಾರ್ಯಕ್ರಮದ ನಂತರ ಶ್ರೀ ರಾಮ ಕ್ಷೇತ್ರದ ಪೀಠಾಧಿಪತಿಗಳಾದ 1008 ಮಹಾಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷ ಗುರುರಾಜ್ ಗುರಿಪಳ್ಳ, ಗೌರವ ಸಲಹೆಗಾರರಾದ ರಮಾನಂದ ಸಾಲಿಯಾನ್, ಸಲಹೆಗಾರರಾದ ರಾಜೀವ್ ಸಾಲಿಯಾನ್, ವಸಂತ ಪೂಜಾರಿ, ಘಟಕದ ಉಪಾಧ್ಯಕ್ಷ ಸುನಿಲ್ ಕನ್ಯಾಡಿ, ಕಾರ್ಯದರ್ಶಿ ಮಧುರ ರಾಘವ, ಕೋಶಾಧಿಕಾರಿ ನಾಗೇಶ್ ಅದೇಲು, ಮಹಿಳಾ ಸಂಚಾಲನ ಸಮಿತಿಯ ಪ್ರಧಾನ ಸಂಚಾಲಕರಾದ ಲೀಲಾವತಿ ಪಣಕಜೆ ಹಾಗೂ ಪ್ರಶಾಂತ್ ಪಾರೆಂಕಿ, ರೂಪೇಶ್ ಧರ್ಮಸ್ಥಳ, ಸಚಿನ್ ನೂಜೋಡಿ, ಸುಧಾಮಣಿ ಆರ್, ಶಾಂಭವಿ ಮುಂಡೂರು, ರಜತ್ ಮೋರ್ತಾಜೆ, ಪೂರ್ಣಿಮಾ ಮುಂಡಾಜೆ, ಸೌಮ್ಯ ಲಾಯಿಲಾ, ಯೋಗೀಶ್ ಗೇರುಕಟ್ಟೆ, ಜಯರಾಜ್ ನಡಕ್ಕರ, ಅನಿತಾ ಮಂಡೂರು, ರಿಷಿಕಾ ಮಂಡೂರು, ಸತೀಶ್ ಮುಂಡೂರು ಹಾಗೂ ಘಟಕದ ಸದಸ್ಯರು ಮತ್ತು ಮುಂಡೂರು ಭಜನಾ ತಂಡದ ಸದಸ್ಯರು ಭಾಗವಹಿಸಿದ್ದರು.