ಉಜಿರೆ: ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಭಾರತ್ ಸ್ಕೌಟ್ ಗೈಡ್ ಸ್ಥಳೀಯ ಸಂಸ್ಥೆಯ ವತಿಯಿಂದ ಕಬ್ಸ್ ಬುಲ್ ಬುಲ್ ಉತ್ಸವ, ಸ್ಕೌಟ್ ಗೈಡ್ ಮೇಳ ಹಾಗೂ ರೋವರ್ಸ್ ರೇಂಜರ್ಸ್ ಸಮಾಗಮ ಕಾರ್ಯಕ್ರಮದಲ್ಲಿ ಸ್ಥಳೀಯ ಸಂಸ್ಥೆಗಳ ಸ್ಕೌಟ್ ಗೈಡ್, ಕಬ್ಸ್, ಬುಲ್ ಬುಲ್ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಗಳಲ್ಲಿ
ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಸಿ.ಬಿ.ಎಸ್.ಇ ಶಾಲೆಯ ವಿದ್ಯಾರ್ಥಿಗಳು ತಮ್ಮ ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸಿ, ಹಲವಾರು ಬಹುಮಾನಗಳನ್ನು ಪಡೆದರು.
ಬುಲ್ ಬುಲ್ ವಿಭಾಗದ ಚಿತ್ರಕಲೆ ಸ್ಪರ್ಧೆಯಲ್ಲಿ 4ನೇ ತರಗತಿ ಆರಾಧ್ಯ ಪ್ರಥಮ, ಕಬ್ ವಿಭಾಗದ ಚಿತ್ರಕಲೆಯಲ್ಲಿ 4ನೇ ತರಗತಿ ಕೇಸರ್ ಪ್ರಥಮ, ಕಬ್ ವಿಭಾಗದ ಮಾಸ್ಕ್ ತಯಾರಿ ಸ್ಪರ್ಧೆಯಲ್ಲಿ 3ನೇ ತರಗತಿ ಸುಶ್ರುತ್ ಪ್ರಥಮ, ಬುಲ್ ಬುಲ್ ವಿಭಾಗದ ಮಾಸ್ಕ್ ತಯಾರಿ ಸ್ಪರ್ಧೆಯಲ್ಲಿ 4ನೇ ತರಗತಿ ಸಾಧ್ವಿತಾ ಪ್ರಥಮ, ಗೈಡ್ ವಿಭಾಗದ ರಂಗೋಲಿ ಸ್ಪರ್ಧೆಯಲ್ಲಿ 5ನೇ ತರಗತಿ ಲಕ್ಷ್ಯ ಪ್ರಥಮ, ಸ್ಕೌಟ್ ವಿಭಾಗದ ಬೆಂಕಿ ಇಲ್ಲದೆ ಅಡುಗೆ ತಯಾರಿ ಸ್ಪರ್ಧೆಯಲ್ಲಿ ಸ್ಕೌಟ್ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ವಿಜೇತರಾದ ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಪ್ರಾಂಶುಪಾಲ ಶ್ರೀ ಮನ್ಮೋಹನ್ ನಾಯ್ಕ್ ಕೆ.ಜಿ ಹಾಗೂ ಶಿಕ್ಷಕ ವೃಂದ ಅಭಿನಂದಿಸಿದರು.