
ಬೆಳ್ತಂಗಡಿ : ಸ್ತ್ರೀ ಸಂಘಟನೆ ಬೆಳ್ತಂಗಡಿ ಘಟಕ ವತಿಯಿಂದ, ಹೋಲಿ ರೆಡಿಮಾರ್ ಚರ್ಚ್ ಬಳಿಯಿಂದ ಅಲ್ಲಾಟ ಬೈಲು ಬಡವಾಣೆ ಪರಿಸರದ ಕಸವನ್ನು ತೆಗೆದು ಸ್ವಚ್ಛಗೊಳಿಸಲಾಯಿತು.


ಈ ಕಾರ್ಯವನ್ನು ಚರ್ಚಿನ ಧರ್ಮ ಗುರುಗಳಾದ ವಂದನೀಯ ವಾಲ್ಟರ್ ಡಿಮೆಲ್ಲೋ, ಹೋಲಿರೆಡಿಮಾರ್ ಶಾಲೆಯ ಪ್ರಾಂಶುಪಾಲರು ಹಾಗೂ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಚಾಲನೆಯೊಂದಿಗೆ, ಸ್ತ್ರೀ ಸಂಘಟನೆ ಬೆಳ್ತಂಗಡಿ ಘಟಕದ ಅಧ್ಯಕ್ಷೆ ಶ್ರೀಮತಿ ಸಿಲ್ವಿಯಾ ಪಿಂಟೋ, ಕಾರ್ಯದರ್ಶಿ ಶ್ರೀಮತಿ ಸಿಲ್ವಿಯಾ ಕಾರ್ಡೆರೊ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರ ಸಹಕಾರದೊಂದಿಗೆ ಸ್ವಚತಾ ಆಂದೋಲನ ನಡೆಯಿತು.