ಬಂದಾರು: ಕುರಾಯ ಶ್ರೀ ಸದಾಶಿವ ದೇವಸ್ಥಾನ ಪ್ರತಿಷ್ಠಾ ಮಹೋತ್ಸವ ಹಾಗೂ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ಎ.5ರಂದು ದೇವಸ್ಥಾನದ ವಠಾರದಲ್ಲಿ ಧಾರ್ಮಿಕ ಸಭೆ ನೆರವೇರಿತು.ಸಭಾ ಕಾರ್ಯಕ್ರಮದಲ್ಲಿ ಧರ್ಮಸ್ಥಳ, ವಾಸುಕಿವನ, ಆದಿಶೇಷ ರಾಜೇಶ್ ಆರ್.ಎಸ್ ಕಾರಂತ್ ಆಶೀರ್ವಚನ ನೀಡಿದರು.ಕುರಾಯ ಶ್ರೀ ಸದಾಶಿವ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಗೌಡ ಮಡ್ಯಲಕಂಡ ಸಭಾಧ್ಯಕ್ಷತೆ ವಹಿಸಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ದಯಾನಂದ ಪೂಜಾರಿ, ಯುವ ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ಬೆಂಗಳೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಕುರಾಯ ದೇವಸ್ಥಾನ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಚಂದಪ್ಪ ಪೂಜಾರಿ, ಪ್ರಗತಿಪರ ಕೃಷಿಕ ಧರ್ಣಪ್ಪ ಗೌಡ ಅಂಡಿಲ, ಯಕ್ಷಗಾನ ಸಮಿತಿ ಅಧ್ಯಕ್ಷ ಹರೀಶ್ ಹೊಳ್ಳ ಕಲ್ರೋಡಿ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಕೃಷ್ಣಯ್ಯ ಆಚಾರ್ಯ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವೆಂಕರಮಣ ಗೌಡ ಬಾಳೆಹಿತ್ತಿಲು, ನಿರಂಜನ ಗೌಡ ನಡುಮಜಲು, ಲಕ್ಷ್ಮಣ ನಾಯ್ಕ ಮುಂಡೂರು, ದಮಯಂತಿ ಪಾoಜಾಳ, ರೂಪ ವಿಶ್ವಕರ್ಮ, ಗೌರವ ಉಪಸ್ಥಿತಿ ವಹಿಸಿದ್ದರು.
ಈ ಸಂದರ್ಭದಲ್ಲಿ ಕುರಾಯ ಶ್ರೀ ಸದಾಶಿವ ದೇವಸ್ಥಾನ ಬ್ರಹ್ಮವಾಹಕರಾದ ಮುರಳಿ ಕುಂಜುರಾಯ, ಕುರಾಯ ದೇವಸ್ಥಾನ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಚಂದಪ್ಪ ಪೂಜಾರಿ ಬೋಲೋಡಿ, ಸಿವಿಲ್ ಕಾಂಟ್ರಾಕ್ಟರ್ ಗುಣಾಕರ ರೈ ಕೊಯ್ಯೂರು, ಇವರುಗಳಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು.

ಅಧ್ಯಾಪಕರಾದ ಮಹೇಶ್ ಬೆಳಾಲು ಸ್ವಾಗತಿಸಿ ಸನ್ಮಾನ ಪತ್ರ ವಾಚಿಸಿ, ಮಾಧವ ಗೌಡ ದೊರ್ತೋಡಿ ನಿರೂಪಿಸಿದರು. ವೆಂಕಟರಮಣ ಬಾಳೆಹಿತ್ತಿಲು ಧನ್ಯವಾದವಿತ್ತರು.ವೇದಿಕೆಯಲ್ಲಿ ಬೆಳ್ಳಾರೆ ಕಾಣಿಯೂರು ಗಾನ ಕೀರ್ತನ ಸಂಗೀತ ಶಾಲೆ ಮಾಲಿನಿ ಕೃಷ್ಣ ಮೋಹನ್ ಎಮ್ ಮ್ಯೂಸಿಕ್ ಶಿಕ್ಷಕ ವೃಂದದವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಹಾಗೂ ಯಕ್ಷಗಾನ ವೈಭವ ಕಾರ್ಯಕ್ರಮ ನೆರವೇರಿತು.
ಕುರಾಯ ಶ್ರೀ ಸದಾಶಿವ ಭಕ್ತ ವೃಂದ, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ ಹಾಗೂ ಮೈರೋಳ್ತಡ್ಕ ಶ್ರೀ ಸದಾಶಿವ ಶಾಮಿಯಾನ ಮಾಲಕರಾದ ಪ್ರಶಾಂತ ಗೌಡ ನಿರುoಬುಡ ಇವರ ಪ್ರಾಯೋಜಕತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.