ಮದ್ದಡ್ಕ: ಶ್ರೀರಾಮ ಸೇವಾ ಸಮಿತಿ ಮದ್ದಡ್ಕ ಮತ್ತು ವಿಶ್ವ ಹಿಂದೂ ಪರಿಷತ್ ಭಜರಂಗಧಳ ಮದ್ದಡ್ಕ ಇದರ ಆಶ್ರಯದಲ್ಲಿ ಎ.6 ರoದು ರಾಮನವಮಿ ಉತ್ಸವದ ಪ್ರಯುಕ್ತ ಸೂರ್ಯೋದಯದಿಂದ ಸೂರ್ಯಾಸ್ತಮಾನ ವರೆಗೆ ಜರಗುವ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಶ್ರೀರಾಮ ಭಜನಾ ಮಂದಿರದಲ್ಲಿ ಗಣ ಹೋಮ ವೈದಿಕ ವಿಧಿ ವಿಧಾನಗಳನ್ನು ಶ್ರೀ ಕ್ಷೇತ್ರ ಓಡಿಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಎಂ. ರಘುರಾಮ್ ಭಟ್ ಮಠ ನೆರವೇರಿಸಿ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ ಪ್ರಭಾಕರ ಬಂಗೇರ, ರತ್ನಾಕರ ಭಟ್ ವೇದಾಶ್ರಯ ಸರಪಾಡಿ ಮದ್ದಡ್ಕ, ಹೊನ್ನಪ್ಪ ಕುಲಾಲ್ ಅಧ್ಯಕ್ಷರು ಸಹಪರಿವಾರ ಶ್ರೀ ಸಾಸ್ತಾರ ದೇವಸ್ಥಾನ ಮಾಣೂರು, ಶ್ರೀ ಕ್ಷೇತ್ರ ಓಡಿಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಶ್ರೀರಾಮ ಸೇವಾ ಸಮಿತಿಯ ಗೌರವಾಧ್ಯಕ್ಷ ರಾಜಪ್ರಕಾಶ್ ಪಡ್ಡೈಲು, ಅಧ್ಯಕ್ಷ ಮನೋಹರ್ ಕೇದಳಿಕೆ, ಉಪಾಧ್ಯಕ್ಷ ಗಣೇಶ್ ಆಚಾರ್ಯ, ಪ್ರಧಾನ ಕಾರ್ಯದರ್ಶ ಪ್ರೀತಮ್ ಆಚಾರ್ಯ, ಕೋಶಾಧಿಕಾರಿ ಸಚಿನ್ ವರ್ಧನ್ ಸಬರಬೈಲು, ಗಣೇಶ್ ಶೆಟ್ಟಿ ಅರ್ಕಜೆ ಅಧ್ಯಕ್ಷರು ವಿಶ್ವ ಹಿಂದೂ ಪರಿಷತ್ ಮದ್ದಡ್ಕ, ಕಾರ್ಯದರ್ಶಿ ವಿನೋದ್ ಶೆಣೈ ಮದ್ದಡ್ಕ, ಯಶೋಧರ ಶೆಟ್ಟಿ ಸಂಚಾಲಕರು ಭಜರಂಗದಳ ಮದ್ದಡ್ಕ ಹಾಗೂ ಶ್ರೀರಾಮ ಸೇವಾ ಸಮಿತಿ ಮದ್ದಡ್ಕ, ಭಜರಂಗದಳ ಮದ್ದಡ್ಕ, ವಿಶ್ವ ಹಿಂದು ಪರಿಷತ್ ಮದ್ದಡ್ಕ ಪದಾಧಿಕಾರಿಗಳು ಸರ್ವ ಸದಸ್ಯರು ಉಪಸ್ಥಿತರಿದ್ದರು.