ಅಳದಂಗಡಿ : ಇಲ್ಲಿನ ಸತ್ಯದೇವತಾ ದೈವಸ್ಥಾನದಲ್ಲಿ ಹನುಮೋತ್ಸವ ತಯಾರಿ ಬಗ್ಗೆ ಸಭೆ ಯಶಸ್ವಿಯಾಗಿ ನಡೆಯಿತು.
ಸಭೆಯಲ್ಲಿ ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲರು ಭಾಗವಹಿಸಿ ಕೆಲವು ಸಲಹೆಗಳನ್ನು ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಸಂಸ್ಕಾರ ಭಾರತೀ ಅಧ್ಯಕ್ಷ ಸಂಪತ್ ಬಿ.ಸುವರ್ಣ ವಹಿಸಿದ್ದರು. ಸಭೆಯಲ್ಲಿ ಶಶಿಧರ ಶೆಟ್ಟಿ ಅಳದಂಗಡಿ, ವಿಜಯ ಗೌಡ ವೇಣೂರು, ನಿತ್ಯಾನಂದ ನಾವರ, ಎಂ.ಪಿ.ಶೇಖರ್ ಶಿರ್ಲಾಲು, ಭಾಸ್ಕರ ಸಾಲ್ಯಾನ್ ಶಿರ್ಲಾಲು, ಯೋಜನೆಯ ಮೆಲ್ವಿಚಾರಕಿ ಸುಮಂಗಲ, ಹರೀಶ್ ಕಲ್ಲಾಜೆ, ವಿಶ್ವನಾಥ ಬಂಗೇರ, ರವಿ ಪೂಜಾರಿ, ಹರೀಶ್ ಆಚಾರ್ಯ, ಸೇವಾಪ್ರತಿನಿಧಿಗಳು, ಪ್ರಧಾನ ಸಂಚಾಲಕರು, ಸಂಚಾಲಕರು, ವಿವಿಧ ಸಮಿತಿಗಳ ಪ್ರಮುಖರು, ಸ್ವಯಂ ಸೇವಕರು ಭಾಗವಹಿಸಿದ್ದರು.
ವಿಜಯ ಕುಮಾರ್ ಜೈನ್ ಸ್ವಾಗತಿಸಿ, ಪ್ರಭಾಕರ ಶೆಟ್ಟಿ ಉಪ್ಪಡ್ಕ ಧನ್ಯವಾದ ಸಲ್ಲಿಸಿದರು.