
ಬೆಳ್ತಂಗಡಿ: ಜೈನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಜೈನ ಜಾತಿ ಮತ್ತು ಧರ್ಮಕ್ಕೆ ಅಪಮಾನಗೊಳಿಸಿದ್ದಾರೆಂದು ಆರೋಪಿಸಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ರಾಜು ಶೆಟ್ಟಿ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಉಜಿರೆ ಓಡಲ ನಿವಾಸಿ ಅಜಯ್ ಕುಮಾರ್ ಪಿ.ಕೆ ಅವರು ಇಂದು ಸಂಜೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಎ. 7 ರಂದು ಸಾಮಾಜಿಕ ಜಾಲತಾಣದಲ್ಲಿ ಒಂದು ಆಡಿಯೋ ಸಂಭಾಷಣೆಯ ತುಣುಕು ಹರಿದಾಡುತ್ತಿದ್ದು, ಆಡಿಯೋದಲ್ಲಿ ಕೇಳಿ ಬರುತ್ತಿರುವ ಸ್ವರವನ್ನು ಆಳಿಸಿದಾಗ ಚಿರಪರಿಚಿತ ಸ್ವರವಾಗಿದ್ದು, ಇದು
ಮಹೇಶ್ ಶೆಟ್ಟಿ ತಿಮರೋಡಿ ಮತ್ತು ರಾಜು ಶೆಟ್ಟಿ ಇವರ ಸಂಭಾಷಣೆಯ ಸ್ವರವಾಗಿರುತ್ತದೆ. ಆಡಿಯೋದಲ್ಲಿ ಜೈನರನ್ನು ಹಾಗೂ ಜೈನ ಧರ್ಮವನ್ನು ಅತ್ಯಂತ ಅವಹೇಳನಕಾರಿಯಾಗಿ ಇಬ್ಬರು ಮಾತಾನಾಡಿದ್ದು ಜೈನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ.

ಈ ಅಡಿಯೋದಲ್ಲಿ “ ದುಡ್ಡು ಹಿಂದುಲೇನನೆ ಜೈನೆರೆನ ಅತ್ತತ್ತ, ದುಡ್ಡು ಹಿಂದುಲೆನನೆ ದುರುಪಯೋಗ ಮಲ್ಪರ ಅಕುಲು ಆಂಡಲಾ ನಮ್ಮಕ್ಕುಲೆಗು ಗೊತ್ತಾಪುಜಿ ನನಲಾ ಅವು ಬೇಜಾರ್ ಮುಲುಲ ಅಂಚನೆ ಉಂಡು ನಮ್ಮ ಅಜಿಲ ಸೀಮೆಲ ಅಂಚನೆ ಉಂಡು ಮೊಕುಲೆನ್ ಬುಳೆವರೇ ಬುಡಿಯಾರೇ ಬಲ್ಲಿ ನೆಟ್ ಪೆಟ್ ತಿಂದೆಂರ್ಡ ಅಡೆಗ್ ಜೈನೆರರ್ನ ಆಡಳಿತ ಮುಗಿಯಿಂಡ್ ಈ ಜೈನೆರೆಗ್ ಅವೊಂಜಿ ಸುಪ್ರಿಂ ಕೋರ್ಟ್ ” ಎಂದು ಹೇಳಿರುವುದಲ್ಲದೆ, ಜೈನರಿಗೆ ಅವ್ಯಾಚ್ಯ ಶಬ್ಧಗಳಿಂದ ಬೈದು ಜೈನ ಜಾತಿಯನ್ನು ನಿಂದಿಸಿರುತ್ತಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಈ ಸಂಭಾಷಣೆಯನ್ನು ಆಲಿಸಿದಾಗ ಚಿರಪರಿಚಿತ ಸ್ವರಗಳಾದ, ಉಜಿರೆಯ ಕುಂಜರ್ಪ ಎಂಬಲ್ಲಿಯ ನಿವಾಸಿಯಾದ ಮಹೇಶ್ ಶೆಟ್ಟಿ ತಿಮರೋಡಿ ಮತ್ತು, ಬಡಗಕಾರಂದೂರು ರಾಜು ಶೆಟ್ಟಿ ಇವರದ್ದಾಗಿರುತ್ತದೆ. ಫೋನಿನಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ರಾಜು ಶೆಟ್ಟಿ ಇವರು ಮಾತಾನಾಡಿದ ಸಂಭಾಷಣೆಯ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಜೈನ ಜಾತಿಗೆ ಅಪಮಾನ ಹಾಗೂ ಜೈನ ಧರ್ಮದ ಬಗ್ಗೆ ನಿಂದಿಸಿ ಸಮಾಜದ ಅಶಾಂತಿಗೆ ಕಾರಣವಾಗಿದೆ ಎಂದು ದೂರಿನಲ್ಲಿ ಅಪಾದೀಸಲಾಗಿದೆ.
ಜೈನರ ಧಾರ್ಮಿಕ ಭಾವನೆಗಳಿಗೆ ಅಪಮಾನ ಮಾಡಿ ಆಘಾತವನ್ನುಂಟು ಮಾಡುವ ಉದ್ದೇಶದಿಂದ ದ್ವೇಷ ಭಾವನೆಯಿಂದ ಕೃತ್ಯವನ್ನು ಮಾಡಿದ್ದು, ಇವರಿಬ್ಬರ ವಿರುದ್ಧ, ಮೇಲೆ ಮೇಲಿನ ಅಪರಾಧಕ್ಕಾಗಿ ಹಾಗೂ ತಮ್ಮ ತನಿಖೆಯ ವೇಳೆ ಕಂಡು ಬರುವ ಎಲ್ಲಾ ರೀತಿಯ ಅಪರಾಧಕ್ಕಾಗಿ ಸೂಕ್ತ ಪ್ರಕರಣ ದಾಖಲಿಸಿ, ನ್ಯಾಯ ಒದಗಿಸಿ ಕೊಡಬೇಕಾಗಿ ಒತ್ತಾಯಿಸಿದ್ದಾರೆ. ಮನವಿ ನೀಡುವ ಸಂದರ್ಭದಲ್ಲಿ ಜೈನ ಸಮಾಜ ಬಾಂಧವರು ಉಪಸ್ಥಿತರಿದ್ದರು.