ಬೆಳ್ತಂಗಡಿ: ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ನಡೆಸಿದ 2025 ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ 10 ನೇ ತರಗತಿಯಲ್ಲಿ ಎಲ್ಲಾ ನಾಲ್ಕು ವಿಷಯಗಳಲ್ಲೂ ತಲಾ 100 ಅಂಕಗಳೊಂದಿಗೆ ಒಟ್ಟು 400 ರಲ್ಲಿ 400 ಪಡೆದು, ಉಣ್ಣಾಲು , ಕೊಯ್ಯೂರು ಸಿರಾಜುಲ್ ಹುದಾ ಅರೇಬಿಕ್ ಸ್ಕೂಲ್ ವಿಧ್ಯಾರ್ಥಿನಿ ನೂರುನ್ನಿಸಾ ರಾಷ್ಟ್ರ ಮಟ್ಟದಲ್ಲಿ ಪ್ರಥಮ ರ್‍ಯಾಂಕ್ ಪಡೆದು ಮದರಸ ಕ್ಕೆ ಕೀರ್ತಿ ತಂದಿರುತ್ತಾಳೆ,.
ವಿದ್ಯಾರ್ಥಿನಿಯು ಇಬ್ರಾಹೀಂ ಹಾಗೂ ಶಾಹಿದಾ ದಂಪತಿಯ ಪುತ್ರಿಯಾಗಿರುತ್ತಾಳೆ.
ಈ ವರ್ಷದ ಪಬ್ಲಿಕ್ ಪರೀಕ್ಷೆಯಲ್ಲಿ ರೇಂಜ್ ಮಟ್ಟದಲ್ಲಿ 400 ರಲ್ಲಿ 396 ಅಂಕದೊಂದಿಗೆ 2nd Rank ಗಳಿಸಿದ ಮೂವರು ವಿಧ್ಯಾರ್ಥಿನಿಯರಾದ , ಫಾತಿಮತ್ ಝಕಿಯ್ಯಾ , ಫಾತಿಮತ್ ಸಹ್‌ಲಾ , ಫಾತಿಮತ್ ಮಾರಿಯಾ ಎಲ್ಲಾ ವಿಷಯದಲ್ಲೂ A++ ಗ್ರೇಡ್ ಪಡೆದು ಮಿಂಚಿದ್ದಾರೆ. ಮುಹಮ್ಮದ್ ರಶಾದ್ 400 ರಲ್ಲಿ 390 ಮುಹಮ್ಮದ್ ಶಫೀಕ್ 400 ರಲ್ಲಿ 365 ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ.